-->
ಸ್ಪೂರ್ತಿ ಶೆಟ್ಟಿಗೆ "ಮಿಸ್ ಯೂನಿವರ್ಸ್ ಕರ್ನಾಟಕ 2026" ರನ್ನರ್ಸ್ ಅಪ್ ಕಿರೀಟ

ಸ್ಪೂರ್ತಿ ಶೆಟ್ಟಿಗೆ "ಮಿಸ್ ಯೂನಿವರ್ಸ್ ಕರ್ನಾಟಕ 2026" ರನ್ನರ್ಸ್ ಅಪ್ ಕಿರೀಟ


ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ ಕರ್ನಾಟಕ 2026 ಸೌಂದರ್ಯ ಸ್ಪರ್ಧೆಯಲ್ಲಿ ಉಡುಪಿಯ ಸ್ಪೂರ್ತಿ ಶೆಟ್ಟಿ ಮೊದಲ ರನ್ನರ್ಸ್ ಅಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.


ಮಾರ್ಚ್ 2026 ರ ಕೊನೆಯ ವಾರದಲ್ಲಿ ಮಿಸ್ ಯೂನಿವರ್ಸ್ ಕರ್ನಾಟಕ 2026 ರ ಅಂತಿಮ 25 ಸ್ಪರ್ಧಿಗಳನ್ನುಘೋಷಿಸಲಾಗಿದ್ದು, ಸ್ಪೂರ್ತಿ ಶೆಟ್ಟಿ ಅವರು ಈ ಸ್ಪರ್ಧೆಯ ಟಾಪ್ 25 ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದರು.  


ಮಿಸ್ ಯೂನಿವರ್ಸ್ ಕರ್ನಾಟಕ 2026 ಸೌಂದರ್ಯ ಸ್ಪರ್ಧೆಯ ಕಿರೀಟವನ್ನು ಮಂಗಳೂರು ಮೂಲದ ಲೇಖನ ಹೆಗ್ಡೆ ಪಡೆದುಕೊಂಡರು. ಮೊದಲ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಸ್ಪೂರ್ತಿ ಶೆಟ್ಟಿ ಪಡೆದು ಕೊಂಡರೆ ಎರಡನೇ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಜಾಗೃತಿ ಚೋಪ್ರಾ ತನ್ನದಾಗಿಸಿಕೊಂಡರು. ಉಡುಪಿ ಮೂಲದವರಾದ ಸ್ಪೂರ್ತಿ ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, 'ಮಿಸ್ ಹಾಗೂ ಮಿಸಸ್ ಸೆಂಟ್ರಲ್ ಇಂಡಿಯಾ' (Miss & Mrs Central India) ಸೀಸನ್ 3ರಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. 






Ads on article

Advertise in articles 1

advertising articles 2

Advertise under the article