-->
ಕುದ್ರೋಳಿ ಕ್ಷೇತ್ರದಲ್ಲಿ ನವದುರ್ಗೆ ನೃತ್ಯ ಸ್ಪರ್ಧೆ: ಉಡುಪಿಯ ಸುಹಾನಿ ಪ್ರಥಮ

ಕುದ್ರೋಳಿ ಕ್ಷೇತ್ರದಲ್ಲಿ ನವದುರ್ಗೆ ನೃತ್ಯ ಸ್ಪರ್ಧೆ: ಉಡುಪಿಯ ಸುಹಾನಿ ಪ್ರಥಮ



ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಪ್ರಯುಕ್ತ ಪಿಕೆ ದೂಜ ಪೂಜಾರಿ ಪ್ರಯೋಜಕತ್ವದಲ್ಲಿ ನಡೆದ ನವದುರ್ಗೆ ನೃತ್ಯ ಸ್ಪರ್ಧೆಯಲ್ಲಿ ಉಡುಪಿಯ ಸುಹಾನಿ ಅವರರು ಆಕರ್ಷಕ ಟ್ರೋಫಿಯೊಂದಿಗೆ ಪ್ರಥಮ ಬಹುಮಾನ ಪಡೆದು ಗಮನ ಸೆಳೆದಿದ್ದಾರೆ.


ನವರಾತ್ರಿ ಸಂಭ್ರಮದ ಅಂಗವಾಗಿ ನಡೆದ ಸ್ಪರ್ಧೆಯಲ್ಲಿ ವಿವಿಧ ಸ್ಪರ್ಧಿಗಳು ತಮ್ಮ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಿದರು. ಸುಹಾನಿ ಪ್ರಥಮ ಬಹುಮಾನವಾಗಿ 15,000 ನಗದು, ಟ್ರೋಫಿ ಹಾಗೂ ಪ್ರಮಾಣಪತ್ರ ಪಡೆದರು. ಶಾನ್ಯಾ ಬಿ. ಸುವರ್ಣ ದ್ವಿತೀಯ ಬಹುಮಾನವಾಗಿ 10,000 ನಗದು ಬಹುಮಾನ ಗಳಿಸಿದರೆ, ಸೈಷಾ ತೃತೀಯ ಸ್ಥಾನ ಪಡೆದರು.


ವೇಣ್ಯಾ, ಬಾನ್ವಿ ಕುಲಾಲ್, ದಿಯಾ ಡಿ., ಕಾಶ್ವಿ, ಸಂಚನಾ ಮತ್ತು ಗಾನವಿ ಪ್ರೋತ್ಸಾಹಕ ಬಹುಮಾನಕ್ಕೆ ಭಾಜನರಾದರು.

ಪ್ರಥಮ ಬಹುಮಾನಿತೆ ಸುಹಾನಿ ಅವರು ಉಡುಪಿಯ ಕುಕ್ಕಿಕಟ್ಟೆ ನಿವಾಸಿಗಳಾದ ಗೋಪಿಚಂದ್ ಮತ್ತು ಅನಿತಾ ದಂಪತಿಯ ಪುತ್ರಿ. ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿ.

ಸುಹಾನಿಯ ನೃತ್ಯ ಪ್ರದರ್ಶನಕ್ಕೆ ಉಡುಪಿಯ ಎಕ್ಸ್‌ಟ್ರೀಮ್ ಡ್ಯಾನ್ಸ್ ಅಕಾಡೆಮಿಯ ಮಂಜಿತ್ ಶೆಟ್ಟಿ ಕೊರಿಯೋಗ್ರಫಿ ಮಾಡಿದ್ದು, ಸುಹಾನಿ ಅವರು ಮಂಜಿತ್ ಶೆಟ್ಟಿ ಅವರ ಶಿಷ್ಯೆಯಾಗಿದ್ದಾರೆ. ಜತೆಗೆ, ಮಣಿಪಾಲದ ನೃತ್ಯ ಕಲಾ ಮಂದಿರದ ವಿದುಷಿ ಸವಿತಾ ಮುರಳೀಧರ್ ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ.

ಶಾಲಾ ಶಿಕ್ಷಣದ ಜತೆಗೆ ನೃತ್ಯ ಕಲೆಯಲ್ಲಿಯೂ ಆಸಕ್ತಿ ಬೆಳೆಸಿಕೊಂಡಿರುವ ಸುಹಾನಿ, ವಿವಿಧ ಡ್ಯಾನ್ಸ್ ಸ್ಪರ್ಧೆಯಲ್ಲಿ ಹತ್ತು ಹಲವು ಬಹುಮಾನಗಳನ್ನು ಗಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article