ಏ. 8: ರಾಜೀವ್ ನಗರ ಪಬ್ಲಿಕ್ ಶಾಲೆಯಲ್ಲಿ ಆಂಗ್ಲಮಾಧ್ಯಮ ಕೊಠಡಿ ಸೇರಿ 2 ತರಗತಿಗಳ ಉದ್ಘಾಟನೆ
ಲಯನ್ಸ್ ಕ್ಲಬ್ ಮಣಿಪಾಲ ಇದರ ವತಿಯಿಂದ ಮಣಿಪಾಲದ ರಾಜೀವ್ ನಗರದಲ್ಲಿರುವ ಪಬ್ಲಿಕ್ ಶಾಲೆಯಲ್ಲಿ "ಕೃಷ್ಣ ಬ್ಲಾಕ್" ಅಡಿಯಲ್ಲಿ ಸ್ಮಾರ್ಟ್ ಟಿವಿಗಳಿಂದ ಸಜ್ಜುಗೊಂಡ ಆಂಗ್ಲ ಮಾಧ್ಯಮ ಕೊಠಡಿ ಸಹಿತ ಎರಡು ವಿಶಾಲ ತರಗತಿಗಳ ಉದ್ಘಾಟನಾ ಕಾರ್ಯಕ್ರಮವು ಏ. 8 ರಂದು ಉದ್ಘಾಟನೆಗೊಳ್ಳಲಿದೆ ಎಂದು ಲಯನ್ಸ್ ಕ್ಲಬ್ ಮಣಿಪಾಲ ಇದರ ಕಾರ್ಯದರ್ಶಿ ಡಾ. ಹೆಚ್. ಗಣೇಶ್ ಪೈ ತಿಳಿಸಿದ್ದಾರೆ.
ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಈ ಕಟ್ಟಡವನ್ನು ಸುಮಾರು 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, Testprep Prints Pvt Ltd, TMG Sunidhi Foundation (Manipal Energy and Infratech Pvt Ltd ) Koramangala Constructions Pvt Ltd ಸಂಸ್ಥೆಗಳ CSR ಸಹಾಯದಿಂದ ನಿರ್ಮಿಸಲಾಗಿದೆ. ನೂತನ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ಎ. 8 ರಂದು ಬೆಳಗ್ಗೆ 9.30 ಕ್ಕೆ ಲಯನ್ಸ್ ಜಿಲ್ಲೆ 317C ಇದರ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಉದ್ಘಾಟಿಸಲಿದ್ದಾರೆ. ಕಳೆದ ವರ್ಷ ನಾವು ಈ ಶಾಲೆಗೆ ಒಂದು ಆಡಿಟೋರಿಯಂ ನಿರ್ಮಿಸಿದ್ದೇವೆ. ಹಾಗೆಯೇ, ಗ್ರಂಥಾಲಯಕ್ಕೆ ಹಲವು ಹೊಸ ಪುಸ್ತಕಗಳನ್ನು ಮತ್ತು 12 ಕಂಪ್ಯೂಟರ್‌ಗಳನ್ನು ನೀಡಿದ್ದೇವೆ. ಜೊತೆಗೆ 3 ಸ್ಮಾರ್ಟ್ ತರಗತಿಗಳನ್ನು ಕೂಡ ಒದಗಿಸಿದ್ದೇವೆ ಎಂದರು.
ಮಣಿಪಾಲ ಲಯನ್ಸ್ ಕ್ಲಬ್ 34 ವರ್ಷಗಳ ಇತಿಹಾಸ ಹೊಂದಿದ್ದು, 70 ಕ್ಕೂ ಹೆಚ್ಚು ಸದಸ್ಯರೊಂದಿಗೆ ಮಣಿಪಾಲ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಮಾಜ ಸೇವೆಯನ್ನು ನಿರಂತರವಾಗಿ ಮಾಡುತ್ತಿದೆ. 30 ಕ್ಕೂ ಹೆಚ್ಚು ಕಣ್ಣು ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರಗಳನ್ನು ನಡೆಸಿ, 2000 ಸಮೀಪದ ದೃಷ್ಟಿ ಕನ್ನಡಕಗಳನ್ನು ವಿತರಿಸಿದ್ದೇವೆ.
ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳಿಗಾಗಿ ಮಣಿಪಾಲ ಲಯನ್ಸ್ ಕ್ಲಬ್ ಮಕ್ಕಳ ವಾರ್ಡ್‌ಳಿಗೆ ಮೈಕ್ರೋಸ್ಕೋಪ್‌ಗಳು, ಫ್ರಿಜ್‌ಗಳು, ಬಯೋ ಸೈರಿಲೈಸೇಶನ್ ಘಟಕಗಳಂತಹ ಆಧುನಿಕ ಸಾಧನಗಳನ್ನು ಒದಗಿಸಿದೆ. ಲಯನ್ಸ್ ಇಂಟರ್ನ್ಯಾಷನಲ್‌ನ ಅನುದಾನದಿಂದ 10 ಲಕ್ಷ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಮನರಂಜನಾ ಕೊಠಡಿಯನ್ನು ನಿರ್ಮಿಸಲಾಗಿದೆ.
ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಿರುವ ಮಕ್ಕಳಿಗಾಗಿ “ಹೋಮ್ ಅವೇ ಫ್ರಮ್ ಹೋಮ್" ಯೋಜನೆಯಡಿ ವಾಸಸ್ಥಳವನ್ನು ನಿರ್ಮಿಸಿ, ಮಕ್ಕಳಿಗೆ ಮತ್ತು ಅವರ ಪಾಲಕರಿಗೆ ಉಚಿತ ವಸತಿ ಮತ್ತು ಆಹಾರ ಸೌಲಭ್ಯವನ್ನು ಒದಗಿಸಲಾಗಿದೆ. ಮಣಿಪಾಲ ಲಯನ್ಸ್ ಕ್ಲಬ್ ಪ್ರತೀ ವಾದ ಅವರಿಗೆ ಕಲಾ ತರಗತಿಗಳನ್ನು ನಡೆಸುತ್ತಿದೆ.
ಮೇಕ್ ಎ ವಿಶ್ ಯೋಜನೆಯಡಿ ಪ್ರತಿ ತಿಂಗಳು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇರುವ 3 ಮಕ್ಕಳ ಕನಸುಗಳನ್ನು ಈಡೇರಿಸಲಾಗುತ್ತದೆ. ಉದಾಹರಣೆಗೆ ಐಪ್ಯಾಡ್, ಸೈಕಲ್, ಬ್ಯಾಟರಿ ಚಾಲಿತ ಕಾರುಗಳು, ಸ್ಮಾರ್ಟ್ ಫೋನ್ ಗಳನ್ನು ನೀಡಲಾಗುತ್ತದೆ. ಮಣಿಪಾಲ ಲಯನ್ಸ್ ಕ್ಲಬ್ ಕೃಷ್ಣಾನುಗ್ರಹ ಅನಾಥಾಶ್ರಮದಲ್ಲಿ ಮಕ್ಕಳಿಗೆ ಸೇವೆ ನೀಡುತ್ತಿದೆ. ಎಲ್ಲಾ ಹವಾಮಾನಕ್ಕೆ ಅನುಕೂಲವಾದ ಆಟದ ಮೈದಾನವನ ನಿರ್ಮಿಸಿದ್ದು, ಮಕ್ಕಳಿಗೆ ಜೋಲುಗಳು, ವಾಶಿಂಗ್ ಮೆಷಿನ್‌ಗಳು, ಓವರ್‌ಹೆಡ್ ಪ್ರೋಜೆಕ ಲ್ಯಾಪ್‌ಟಾಪ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ಈ ವರ್ಷ ನಾವು ಮಾನಸಿಕ ಆರೋಗ್ಯ ಮತ್ತು ಸುಖ ಜೀವನ ವಾರ ಹಾಗೂ ಹಸಿವು ನಿವಾ ಸೇವಾ ವಾರವನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಮಣಿಪಾಲ ಲಯನ್ಸ್ ಕ್ಲಬ್ ಏಪ್ರಿಲ್ 18 ರಿ 25 ರವರೆಗೆ ಜಾಗತಿಕ ಪರಿಸರ ಸಂರಕ್ಷಣಾ ವಾರವನ್ನು ಆಚರಿಸುತ್ತಿದೆ. ಡಾ. ಎ.ವಿ. ಬಾಳಿಗಾ ಆಸ್ಪತ್ರೆಯೊಂದಿಗೆ ಸಂಯೋಜಿತವಾದ ಬಂಧು ಪುನರ್ವಸತಿ ತರಬೇತಿ ಕೇಂದ್ರವನ್ನು LC IF ಅನುದಾನ ದಿಂದ ಅಭಿವೃದ್ಧಿಪಡಿಸಿದ್ದೇವೆ ಎಂದರು. ಸುದ್ದಿಗೋಷ್ಟಿಯಲ್ಲಿ ಲಯನ್ಸ್ ಕ್ಲಬ್ ಮಣಿಪಾಲ ಇದರ ಅಧ್ಯಕ್ಷ ರಮೇಶ್ ಕಿಣಿ ಹಾಗೂ ಅರ್ಚನ ಭಕ್ತ ಮೊದಲಾದವರು ಉಪಸ್ಥಿತರಿದ್ದರು.