-->
ಕರಾವಳಿಯಾದ್ಯಂತ "90 ML" ಕಿಕ್: ಅದ್ಧೂರಿಯಾಗಿ ತೆರೆಕಂಡ  ತುಳು ಸಿನಿಮಾ (Video)

ಕರಾವಳಿಯಾದ್ಯಂತ "90 ML" ಕಿಕ್: ಅದ್ಧೂರಿಯಾಗಿ ತೆರೆಕಂಡ ತುಳು ಸಿನಿಮಾ (Video)


ಡಿ ಡಿ ಪ್ರೊಡಕ್ಷನ್ ಲಾಂಛನದಲ್ಲಿ ಅದ್ಧೂರಿಯಾಗಿ ಮೂಡಿ ಬಂದಿರುವ, ರಂಜಿತ್ ಸಿ. ಬಜಾಲ್ ನಿರ್ದೇಶನದ "90 ML" ತುಳು ಸಿನಿಮಾ  ಕರಾವಳಿ ಜಿಲ್ಲೆಗಳಲ್ಲಿ ಭರ್ಜರಿಯಾಗಿ ತೆರೆಕಂಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಸಿನಿಮಾದ ನಾಯಕ ನಟ ವಿನೀತ್ ಕುಮಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಸಿನಿಮಾಕ್ಕೆ ಮಂಗಳೂರಿನ ಭಾರತ್ ಸಿನಿಮಾಸ್‌ನಲ್ಲಿ ಅದ್ಧೂರಿ ಚಾಲನೆ ಸಿಕ್ಕಿದ್ದು, ಚಿತ್ರಮಂದಿರಗಳ ಮುಂದೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ಸಿನಿಮಾದಲ್ಲಿ ಎಲ್ಲೂ ಅಶ್ಲೀಲತೆ ಹಾಗೂ ನೆಗೆಟಿವಿಟಿಗೆ ಆಸ್ಪದ ಕೊಟ್ಟಿಲ್ಲ ಎಂದರು.

ಸಿನಿಮಾದಲ್ಲಿ ವಿನೀತ್ ಕುಮಾರ್ ಹಾಗೂ ರುಹಾನಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ತುಳು ಚಿತ್ರರಂಗದ ಹೆಸರಾಂತ ಕಲಾವಿದರಾದ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ರೋಶನ್ ಶೆಟ್ಟಿ, ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರು, ನಮಿತಾ, ಶೈಲಾಶ್ರೀ ಮತ್ತು ಧೃತಿ ಅಭಿನಯಿಸಿದ್ದಾರೆ.

ಡೋಲ್ಪಿ ಡಿ ಸೋಜ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ರಂಜಿತ್ ಸಿ. ಬಜಾಲ್ ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ತುಳಸಿದಾಸ್ ಮಂಜೇಶ್ವರ್ ಸಂಭಾಷಣೆ ಬರೆದಿದ್ದು, ಅರ್ಜುನ್ ಎಂ.ವಿ ಛಾಯಾಗ್ರಾಹಣ ನಿರ್ವಹಿಸಿದ್ದಾರೆ. ಸೃಜನ್ ಕುಮಾರ್ ತೋನ್ಸೆ ಅವರ ಸಂಗೀತ, ಸಚಿನ್ ರಾಮ್ ಅವರ ಸಂಕಲನ ಹಾಗೂ ಆಚಾರ್ಯ ಗುರು ಅವರ ಡಿಸೈನ್ ಚಿತ್ರದ ಗುಣಮಟ್ಟ ಹೆಚ್ಚಿಸಿವೆ.

ಸದ್ಯ ಮಂಗಳೂರು ಸೇರಿದಂತೆ ಉಡುಪಿ, ಪುತ್ತೂರು, ಬೆಳ್ತಂಗಡಿ, ಸುರತ್ಕಲ್, ಪಡುಬಿದ್ರೆ, ಕಾರ್ಕಳ ಹಾಗೂ ದೇರಳಕಟ್ಟೆಯ ಪ್ರಮುಖ ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಉಡುಪಿಯ ಕಲ್ಪನಾ ಭಾರತ್ ಸಿನಿಮಾ ಹಾಗು ಮಣಿಪಾಲದಲ್ಲೂ ಚಿತ್ರ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ರಂಜಿತ್ ಸಿ. ಬಜಾಲ್, "ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಹಾಸ್ಯ ಮನರಂಜನೆಯೊಂದಿಗೆ ಒಂದು ಉತ್ತಮ ಕಥೆಯನ್ನು ಈ ಸಿನಿಮಾದಲ್ಲಿ ಪ್ರಸ್ತುತಪಡಿಸಲಾಗಿದೆ. ಈ ಚಿತ್ರವನ್ನು ಮಂಗಳೂರು, ಉಡುಪಿ, ಪುತ್ತೂರು, ಬೆಳ್ತಂಗಡಿ, ಪಡುಬಿದ್ರೆ, ಸುರತ್ಕಲ್, ಕಾರ್ಕಳ ಹಾಗೂ ದೇರಳಕಟ್ಟೆ ಸೇರಿದಂತೆ ಕರಾವಳಿಯ ಪ್ರಮುಖ ಕೇಂದ್ರಗಳಲ್ಲಿ ಬಿಡುಗಡೆಯಾಗಿದೆ. ಇಡೀ ಸಿನಿಮಾವನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಂದರ ಪರಿಸರದಲ್ಲಿ ಚಿತ್ರೀಕರಿಸಲಾಗಿದೆ ಎಂದರು. 

ಸುದ್ದಿಗೋಷ್ಠಿಯಲ್ಲಿ ನಟಿ ರುಹಾನಿ ಶೆಟ್ಟಿ, ನಟ ರೋಷನ್ ಶೆಟ್ಟಿ ಉಪಸ್ಥಿತರಿದ್ದರು. 




Ads on article

Advertise in articles 1

advertising articles 2

Advertise under the article