ಎರಡು ವಾರಗಳ ಯುದ್ಧ ವಿರಾಮ ಘೋಷಣೆ
Wednesday, April 08, 2026
ನಿನ್ನೆ ರಾತ್ರಿ ನಡೆದ ಬೆಳವಣಿಗೆಯಲ್ಲಿ ಇರಾನ್ ದೇಶವು ಎರಡು ವಾರಗಳ ಯುದ್ಧ ವಿರಾಮವನ್ನು ಒಪ್ಪಿಕೊಂಡಿದೆ. ಹೋರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮತ್ತೆ ತೆರೆಯಲು ಒಪ್ಪುಕೊಂಡರೆ ದಾಳಿಗಳನ್ನು ನಿಲ್ಲಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿಕೆಗೆ ಪ್ರತಿಕ್ರಿಯೆಯಾಗಿ ಇರಾನ್ ತುಸು ಮೆತ್ತಗಾಗಿದ್ದು, ಶುಕ್ರವಾರ ಪಾಕಿಸ್ಥಾನದ ಇಸ್ಲಾಮಾಬಾದ್‌ನಲ್ಲಿ ಮಾತುಕತೆಗಳು ಆರಂಭವಾಗಲಿವೆ.
ಇರಾನ್ ಸಶಸ್ತ್ರ ಬಲಗಳ ಸಮನ್ವಯದ ಮೂಲಕ ಹೋರ್ಮುಜ್ ಜಲಸಂಧಿ ಮೂಲಕ ಎರಡು ವಾರಗಳ ಅವಧಿಗೆ ವಿದೇಶೀ ಹಡಗುಗಳಿಗೆ ಸುರಕ್ಷಿತ ಪ್ರವೇಶ ನೀಡುವುದಾಗಿ ಇರಾನ್ ವಿದೇಶ ಸಚಿವರು ಹೇಳಿಕೆ ನೀಡಿದ್ದಾರೆ.
ಫೆಬ್ರವರಿ 28ರಿಂದು ಆರಂಭಗೊಂಡ ಯುದ್ಧದಲ್ಲಿ ಸತತ ಸಾವು ನೋವುಗಳು ಸಂಭವಿಸಿದ್ದು, ಇದೀಗ ಯುದ್ಧ ವಿರಾಮ ಘೋಷಣೆಗೊಂಡ ಬೆನ್ನಲ್ಲೇ ಇರಾನ್ ಪ್ರಜೆಗಳು ಬೀದಿಗೆ ಬಂದು ಸಂಭ್ರಮಿಸುತ್ತಿರುವುದು ಕಂಡು ಬಂದಿದೆ ಎಂದು ಅಲ್-ಜಝೀರಾ ಮಾಧ್ಯಮ ವರದಿ ಮಾಡಿದೆ.