ರಸ್ತೆ ಮಧ್ಯೆ ಬಾಯ್ತೆರೆದುಕೊಂಡ ಮೃತ್ಯುಕೂಪ...!
Wednesday, April 08, 2026
ಉಡುಪಿ ನಗರದ ಹಳೆ ಸರಕಾರಿ ಬಸ್ಸು ನಿಲ್ದಾಣದ ಸಮೀಪ ಅಭ್ಯುದಯ ಕೋ ಆಪರೇಟಿವ್ ಬ್ಯಾಂಕಿನ ಎದುರು ಹಾದುಹೋಗುವ ರಸ್ತೆಯ ಅಂಚಿನಲ್ಲಿರುವ ಪಾದಚಾರಿ ರಸ್ತೆಗೆ ಅಳವಡಿಸಿರುವ ಚಪ್ಪಡಿಕಲ್ಲು, ಕುಸಿದು ಕಾಲುವೆಗೆ ಬಿದ್ದಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ.
ಇದರಿಂದಾಗಿ ಪಾದಚಾರಿಗಳು ಕಂದಕದಲ್ಲಿ ಎಡವಿಬಿದ್ದು, ಗಾಯಾಳಾಗಿರುವ ಘಟನೆಗಳು ನಡೆದಿದ್ದು, ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿವೆ. ಕಂದಕ ಇರುವ ರಸ್ತೆ ಕಿರಿದಾಗಿದ್ದು, ಮೂರು ರಸ್ತೆಗಳು ಈ ಸ್ಥಳದಲ್ಲಿ ಸಂಧಿಸುತ್ತದೆ. ವಸತಿ ಪ್ರದೇಶವು ಇದಾದುದರಿಂದ, ವಾಹನ ಸಂಚಾರವು ಹೆಚ್ಚಾಗಿದೆ. ವಾಹನಗಳು ಆಯಾತಪ್ಪಿ ಬಿದ್ದು ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ನಗರಾಡಳಿತ ತಕ್ಷಣವಾಗಿ ಸಮಸ್ಯೆಯನ್ನು ಪರಿಶೀಲಿಸಿ ಪರಿಹರಿಸುವಂತೆ, ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.