-->
ಸರಳಬೆಟ್ಟುವಿನ ರಿಕ್ಷಾ ಚಾಲಕ ಆತ್ಮಹತ್ಯೆಗೆ ಶರಣು

ಸರಳಬೆಟ್ಟುವಿನ ರಿಕ್ಷಾ ಚಾಲಕ ಆತ್ಮಹತ್ಯೆಗೆ ಶರಣು


ಆಟೋ ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದ ಸರಳಬೆಟ್ಟುವಿನ ಉಮಾಮಹೇಶ್ವರಿ ದೇವಸ್ಥಾನದ ಪಕ್ಕದ ಮನೆಯೊಂದರಲ್ಲಿ ನಡೆದಿದೆ.

ಮಂಜುನಾಥ ಅಡಿಗ(34) ಆತ್ಮಹತ್ಯೆ ಮಾಡಿಕೊಂಡವರು.

ಇವರು ಮಣಿಪಾಲ ಸರಳಬೆಟ್ಟು ಪರಿಸರದಲ್ಲಿ ರಿಕ್ಷಾ ಓಡಿಸುತ್ತಿದ್ದು ಸ್ವತಃ ಬಾಡಿಗೆಗೆ ಕಾರುಗಳನ್ನು ಹೊಂದಿದ್ದರು. ಪಡುಬಿದ್ರೆಯ ಕಂಪನಿಗೆ ಬಾಡಿಗೆಗೆ ಒಡಂಬಡಿಕೆ ಮಾಡಿಕೊಂಡಿದ್ದರು. ಮೃತರ ತಾಯಿ ಕೆಎಂಸಿ ಆಸ್ಪತ್ರೆಯ ಶುಶೂಷೆ ವಿಭಾಗದ ಪ್ರಿನ್ಸ್ ಪಾಲ್ ಆಗಿ ಸೇವೆ ಸಲ್ಲಿಸಿದ್ದು ನಿವೃತ್ತರಾಗಿದ್ದಾರೆ. ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷದಲ್ಲಿಯೂ ಸಕ್ರಿಯವಾಗಿ ಕಳೆದ ಎರಡು ಮೂರು ಚುನಾವಣೆಯಲ್ಲಿ ಕಾರ್ಯಕರ್ತರಾಗಿ ದುಡಿದಿದ್ದಾರೆ ಎಂದು ತಿಳಿದುಬಂದಿದೆ.

ಪರೋಪಕಾರಿ ಮತ್ತು ಸರಳತೆಯ ಮಂಜುನಾಥ ಅಡಿಗ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ತಂದೆ ತಾಯಿಗೆ ಮಕ್ಕಳಿಲ್ಲದ ಕಾರಣ ಮಂಜುನಾಥ ಅಡಿಗರನ್ನು ದಂಪತಿ ದತ್ತು ಪಡೆದಿದ್ದು, ಒಬ್ಬನೇ ಮಗನನ್ನು ಕಳೆದುಕೊಂಡು ದಂಪತಿ ಚಿಂತಾಕ್ರಾಂತರಾಗಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article