ನೇಣು ಬಿಗಿದು ಆತ್ಮಹತ್ಯೆ; ಕೊಳೆತ ಸ್ಥಿತಿಯಲ್ಲಿ ಶವಪತ್ತೆ
Tuesday, April 07, 2026
ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಪುಷ್ಕರಣಿಯ ಬಳಿ ಇರುವ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ದರ್ಜಿಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿ ರಾಘವೇಂದ್ರ (45ವ) ಎಂದು ತಿಳಿದುಬಂದಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿರುವುದರಿಂದ ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಣಿಪಾಲ ಪೋಲಿಸ್ ಠಾಣೆಯ ಎ ಎಸ್ ಐ ವಿಜಯ್, ಮುಖ್ಯ ಆರಕ್ಷಕ ಸುಕುಮಾರ್ ಶೆಟ್ಟಿ ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಕೊಳೆತ ಶವವನ್ನು ಕುಣಿಕೆಯಿಂದ, ತೆರವುಗೊಳಿಸಲುಮತ್ತು ಕೆ.ಎಂ.ಸಿ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ನೆರವಾದರು.