ಮನಸ್ಸು ಶುದ್ಧವಾಗಬೇಕಾದರೆ ಹೃದಯದಲ್ಲಿರುವ ದೇವರ ಪ್ರಾರ್ಥನೆ ಅಗತ್ಯ: ವಿನಯಕುಮಾರ್ ಸೊರಕೆ
ಬಳಿಕ ಮಾತನಾಡಿದ ಅವರು, ನಮ್ಮ ಹೃದಯದಲ್ಲಿರುವ ದೇವರನ್ನು ಪ್ರಾರ್ಥಿಸಿದರೆ ಮನಸು ಪರಿಶುದ್ಧವಾಗುತ್ತದೆ. ದೇಗುಲದ ಜೀರ್ಣೋದ್ದಾರಕ್ಕೆ ಎಷ್ಟೋ ಜನ ಅದೃಶ್ಯ ಭಕ್ತರು ಕೈಜೋಡಿಸಿದ್ದಾರೆ. ಮುಂದಿನ ದಿನಗಳಲ್ಲಿ ದೇಗುಲದ ಪವಿತ್ರ್ಯತೆಗೆ ಧಕ್ಕೆ ಬಾರದಂತೆ ಎಲ್ಲರೂ ಒಗ್ಗಟ್ಟಾಗಿ ದೇವರ ಸೇವೆಯನ್ನು ಮಾಡೋಣ ಎಂದರು.
ದೇವಸ್ಥಾನದ ಪ್ರಧಾನ ಅರ್ಚಕ ವಾಸುದೇವ ಉಪಾಧ್ಯ ಪ್ರಸ್ತಾವಿಕವಾಗಿ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸವಿರುವ ದೇವಸ್ಥಾನವನ್ನು ಖರಾಸುರ ರಕ್ತಾಸುರರು ನಿರ್ಮಿಸಿದ್ದಾರೆ ಎನ್ನುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಒಂದು ಗ್ರಾಮ ರಾಮರಾಜ್ಯ ಆಗಬೇಕಾದರೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳು ಬೇಕು. ಧಾರ್ಮಿಕ ಕೇಂದ್ರಗಳು ಬೇಕು. ಮನಸ್ಸು ಶುದ್ಧವಾಗಿ ಇರಬೇಕಾದರೆ ಅಲ್ಲಿ ಧಾರ್ಮಿಕ ಕೇಂದ್ರಗಳ ಅವಶ್ಯಕತೆ ಇದೆ ಹಾಗಾಗಿ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯು ಆಗಬೇಕಾಗಿದೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಬೇಕು ಸಕಲ ಸಂಪತ್ತು ಪ್ರಾಪ್ತ ಆಗಬೇಕಾದರೆ ರುದ್ರದೇವನ ಪ್ರಾರ್ಥನೆ ಅಗತ್ಯವಿದೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂಎ ಗಪೂರ್ ಮಾತನಾಡಿ, ಸುಂದರವಾದ ಬದುಕು ನಡೆಯಬೇಕಾದರೆ ಧರ್ಮ ಸಹಿಷ್ಣುತೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಧರ್ಮ ಸಹಿಷ್ಣುತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಆದರ್ಶ ಆಸ್ಪತ್ರೆಯ ಡಾ. ಜಿ. ಎಸ್ ಚಂದ್ರಶೇಖರ್ ಮಾತನಾಡಿ, ದೇಶದಲ್ಲಿ ಸಂಸ್ಕೃತಿ ಕುಂಠಿತವಾಗುತ್ತಿರುವ ಸಂದರ್ಭದಲ್ಲಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದರು.
ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀಕಾಂತ್ ಉಪಾಧ್ಯ, ಶಿವಪಾಡಿ ಶ್ರೀ ಉಮಾ ಮಹೇಶ್ವರ ದೇವಸ್ಥಾನದ ಅಧ್ಯಕ್ಷ ಮಹೇಶ್ ಠಾಕೂರ್, ಉಡುಪಿ ಶಾಂತಿ ಸಾಗರ್ ಹೋಟೆಲ್ ಗ್ರೂಪ್ ನ ಪ್ರಭಾಕರ್ ಪೂಜಾರಿ,ಮಾಂಡವಿ ಬಿಲ್ಡರ್ಸ್ ನ ಜೇಸನ್ ಡಯಾಸ್, ಬ್ರಹ್ಮ ಕಲಶೋತ್ಸವ ಸಮಿತಿ ಸಂಚಾಲಕ ರಮೇಶ್ ಕಾಂಚನ್ ಮೊದಲದವರು ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಮಾಧವ ಪೂಜಾರಿ ಸ್ವಾಗತಿಸಿದರು. ಅರ್ಪಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
