-->
ಎಲ್​​​ಪಿಜಿ ಸಿಲಿಂಡರ್ ಗ್ರಾಹಕರಿಗೆ ಹೊಸ ನಿಯಮ

ಎಲ್​​​ಪಿಜಿ ಸಿಲಿಂಡರ್ ಗ್ರಾಹಕರಿಗೆ ಹೊಸ ನಿಯಮ


ಜಾಗತಿಕವಾಗಿ ಇಂಧನ ಪೂರೈಕೆಯಲ್ಲಿ ಏರಿಳಿತಗಳಿದ್ದು, ದೇಶದ ಗ್ರಾಹಕರಿಗೆ ಅಡುಗೆ ಅನಿಲದ (LPG) ಕೊರತೆಯಾಗದಂತೆ ಕೇಂದ್ರ ಸರ್ಕಾರವು ಗ್ರಾಹಕರಿಗೆ ಹೊಸ ನಿಯಮವನ್ನು ತಂದಿದೆ. 

ಡಿಜಿಟಲ್ ನೀತಿಗಳ ಅಡಿಯಲ್ಲಿ ಈಗ ಆನ್‌ಲೈನ್ ಬುಕಿಂಗ್ ಪ್ರಮಾಣ ಶೇ. 98ಕ್ಕೆ ತಲುಪಿದ್ದು, ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.

ಇನ್ನು ಮುಂದೆ ಗ್ಯಾಸ್ ಸಿಲಿಂಡರ್ ಮನೆ ಬಾಗಿಲಿಗೆ ಬಂದಾಗ ಬರಿ ಹಣ ಕೊಟ್ಟರೆ ಸಾಲದು. ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ 'ಡೆಲಿವರಿ ಅಥರೈಸೇಷನ್ ಕೋಡ್' (DAC) ಅನ್ನು ತೋರಿಸುವುದು ಕಡ್ಡಾಯವಾಗಿದೆ. ಈ ಕೋಡ್ ಪರಿಶೀಲನೆಯಾದ ನಂತರವೇ ಡೆಲಿವರಿ ಬಾಯ್ ಸಿಲಿಂಡರ್ ಹಸ್ತಾಂತರಿಸಲಿದ್ದಾನೆ. ಇದರಿಂದ ಸಿಲಿಂಡರ್ ಬೇರೆಯವರ ಪಾಲಾಗುವುದು ತಪ್ಪುತ್ತದೆ.

ಕರ್ನಾಟಕದಂತಹ ರಾಜ್ಯಗಳಿಗೆ ಕೆಲಸಕ್ಕಾಗಿ ಬರುವ ವಲಸೆ ಕಾರ್ಮಿಕರಿಗಾಗಿ ಸರ್ಕಾರ 5 ಕೆಜಿ ಸಿಲಿಂಡರ್ ನ ದಾಸ್ತಾನನ್ನು ದ್ವಿಗುಣಗೊಳಿಸಿದೆ. ಬ್ಯಾಚುಲರ್ಸ್ ಮತ್ತು ಸಣ್ಣ ಕುಟುಂಬಗಳಿಗೆ ಇದು ಅನುಕೂಲಕರವಾಗಿದ್ದು, ಈಗಾಗಲೇ 69,000ಕ್ಕೂ ಹೆಚ್ಚು ಇಂತಹ ಸಣ್ಣ ಸಿಲಿಂಡರ್‌ಗಳು ಮಾರಾಟವಾಗಿವೆ.

ಸಿಲಿಂಡರ್ ಹೊತ್ತು ತರುವ ತಲೆನೋವು ಬೇಡ ಎನ್ನುವವರಿಗಾಗಿ ಸರ್ಕಾರ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸೌಲಭ್ಯವನ್ನು ವೇಗವಾಗಿ ಒದಗಿಸುತ್ತಿದೆ. ಬೆಂಗಳೂರಿನಂತಹ ನಗರಗಳಲ್ಲಿ ಸಾವಿರಾರು ಗ್ರಾಹಕರು ಈಗಾಗಲೇ ಪೈಪ್ಡ್ ಗ್ಯಾಸ್‌ಗೆ ಶಿಫ್ಟ್ ಆಗುತ್ತಿದ್ದಾರೆ. ಇದರೊಂದಿಗೆ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ 'ಸಂಕುಚಿತ ಜೈವಿಕ ಅನಿಲ' (CBG) ನೀತಿಗೂ ಸರ್ಕಾರ ಆದ್ಯತೆ ನೀಡುತ್ತಿದ್ದು, ಇದು ಪರಿಸರ ರಕ್ಷಣೆಗೆ ಪೂರಕವಾಗಿದೆ.

ರಾಜ್ಯದಲ್ಲಿ ಸಾರ್ವಜನಿಕ ವಲಯದ ಕಂಪನಿಗಳ (IOCL, HPCL, BPCL) ಅನಿಲ ಬಳಸುವವರ ಸಂಖ್ಯೆ ಶೇ. 62 ರಷ್ಟು ಹೆಚ್ಚಾಗಿದೆ. ಕೃಷಿ ಕ್ಷೇತ್ರದ ಬೆನ್ನೆಲುಬಾಗಿರುವ ರಸಗೊಬ್ಬರ ಕಾರ್ಖಾನೆಗಳಿಗೆ ಗ್ಯಾಸ್ ಪೂರೈಕೆಯನ್ನು ಶೇ. 95 ಕ್ಕೆ ಹೆಚ್ಚಿಸಲಾಗಿದೆ, ಇದರಿಂದ ರೈತರಿಗೆ ಸರಿಯಾದ ಸಮಯಕ್ಕೆ ಗೊಬ್ಬರ ಸಿಗುವಂತಾಗಲಿದೆ.

ಗ್ಯಾಸ್ ಏಜೆನ್ಸಿಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಿಕೊಳ್ಳಿ ಮತ್ತು ಕೇವಲ 'DAC' ಕೋಡ್ ಬಂದಾಗ ಮಾತ್ರ ಸಿಲಿಂಡರ್ ಸ್ವೀಕರಿಸಿ ಸುರಕ್ಷಿತವಾಗಿರಿ ಎಂದು ಸರ್ಕಾರ ತಿಳಿಸಿದೆ.

Ads on article

Advertise in articles 1

advertising articles 2

Advertise under the article