ನಿವೃತ್ತ ಪಿಡಬ್ಲ್ಯೂಡಿ ಇಂಜಿನಿಯರ್ ಪಿ. ಗಣೇಶ್ ಶೆಣೈ ನಿಧನ
Wednesday, April 01, 2026
ಲೋಕೋಪಯೋಗಿ ಇಲಾಖೆಯ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಪಿ. ಗಣೇಶ್ ಶೆಣೈ ಅವರು ಎ. 1ರ ಬುಧವಾರ ಬೆಳಿಗ್ಗೆ ಉಡುಪಿಯ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಮಾಜಿ ಲೋಕಸಭಾ ಸದಸ್ಯ ದಿ. ಪಿ. ರಂಗನಾಥ ಶೆಣೈ ಅವರ ಸಹೋದರರಾದ ಗಣೇಶ್ ಶೆಣೈ ಅವರು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದರು. ಮೃತರು ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.