-->
 ಮೇ 29ರಿಂದಲೇ ರಾಜ್ಯದ ಸರ್ಕಾರಿ ಶಾಲೆಗಳು ಪುನರಾರಂಭ

ಮೇ 29ರಿಂದಲೇ ರಾಜ್ಯದ ಸರ್ಕಾರಿ ಶಾಲೆಗಳು ಪುನರಾರಂಭ


ಕರ್ನಾಟಕ ಸರ್ಕಾರವು 2026-27ನೇ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಟಿಸಿದ್ದು, ಮೇ 29 ರಿಂದಲೇ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಪುನರಾರಂಭಗೊಳ್ಳಲಿವೆ. 

ಈ ಬಾರಿಯ ಶೈಕ್ಷಣಿಕ ಕ್ಯಾಲೆಂಡರ್‌ನಲ್ಲಿ ವಿದ್ಯಾರ್ಥಿಗಳಿಗೆ 18 ದಿನಗಳ ಸುದೀರ್ಘ ದಸರಾ ರಜೆ ಇರಲಿದೆ. ಶೈಕ್ಷಣಿಕ ಸಾಲಿನ ಮೊದಲ ಅವಧಿಯು ಮೇ 29 ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿದ್ದು, ಅಕ್ಟೋಬರ್ 3 ರಿಂದಲೇ ದಸರಾ ರಜೆಗಳು ಆರಂಭವಾಗಲಿವೆ.ದಸರಾ ರಜೆಯ ಮುಕ್ತಾಯದ ನಂತರ, ಎರಡನೇ ಶೈಕ್ಷಣಿಕ ಅವಧಿಯು ಅಕ್ಟೋಬರ್ 22 ರಿಂದ ಪ್ರಾರಂಭವಾಗಿ ಏಪ್ರಿಲ್ 2027 ರವರೆಗೆ ಮುಂದುವರಿಯಲಿದೆ. ಏಪ್ರಿಲ್ ಕೊನೆಯಲ್ಲಿ ವಾರ್ಷಿಕ ಪರೀಕ್ಷೆಗಳೊಂದಿಗೆ ಈ ಸಾಲಿನ ಶೈಕ್ಷಣಿಕ ಅವಧಿ ಮುಕ್ತಾಯಗೊಳ್ಳಲಿದೆ. 

ವರ್ಷದ 365 ದಿನಗಳ ಪೈಕಿ ಒಟ್ಟು 245 ದಿನಗಳು ಕೆಲಸದ ದಿನಗಳಾಗಿರುತ್ತವೆ. ಇದರಲ್ಲಿ 181 ದಿನಗಳನ್ನು ಸಂಪೂರ್ಣವಾಗಿ ಬೋಧನೆಗಾಗಿ ಮೀಸಲಿಡಲಾಗಿದ್ದು, ಉಳಿದ ದಿನಗಳನ್ನು ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಇದರೊಂದಿಗೆ ಜೂನ್ 30 ರ ಒಳಗಾಗಿ ಶಾಲೆಗಳು ತಮ್ಮ ಎಲ್ಲಾ ಪ್ರವೇಶ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. 

ಶಾಲೆಯಿಂದ ಹೊರಗುಳಿದ  ಮಕ್ಕಳನ್ನು ಮರಳಿ ಶಿಕ್ಷಣದ ಮುಖ್ಯವಾಹಿನಿಗೆ ತರಲು ವಿಶೇಷ ಅಭಿಯಾನವನ್ನು ಘೋಷಿಸಿದೆ. 6 ರಿಂದ 18 ವರ್ಷದೊಳಗಿನ ಮಕ್ಕಳನ್ನು ಗುರಿಯಾಗಿಸಿಕೊಂಡು ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಈ ಆಂದೋಲನ ಜಾರಿಗೆ ಬರಲಿದೆ. ಅರ್ಧಕ್ಕೆ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಮರು ದಾಖಲಾತಿ ಮಾಡಿಸುವ ಮೂಲಕ ಅವರಿಗೆ ಉತ್ತಮ ಭವಿಷ್ಯವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

Ads on article

Advertise in articles 1

advertising articles 2

Advertise under the article