ಮೆಹಂದಿ ಸಂಭ್ರಮಕ್ಕೆ ಕ್ರೇನ್ ಮೂಲಕ ವೇದಿಕೆಗಿಳಿದ ವಧು…!
Thursday, May 14, 2026
ಮದುವೆಯ ಸುಂದರ ಕ್ಷಣಗಳನ್ನು ಇನ್ನಷ್ಟು ವಿಶೇಷವಾಗಿಸಲು ಇತ್ತೀಚಿನ ದಿನಗಳಲ್ಲಿ ಕುಟುಂಬಗಳು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿರುವುದು ಸಾಮಾನ್ಯವಾಗಿದೆ. ಅದೇ ರೀತಿಯಲ್ಲಿ ಹೆಬ್ರಿಯಲ್ಲಿ ನಡೆದ ಒಂದು ಮೆಹೆಂದಿ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ಹೆಬ್ರಿಯ ಖ್ಯಾತ ವಕೀಲರಾದ ಕೃಷ್ಣಶೆಟ್ಟಿ ಹಾಗೂ ಜ್ಯೋತಿ ಶೆಟ್ಟಿ ದಂಪತಿಗಳ ಪುತ್ರಿ ಕೃತಿ ಶೆಟ್ಟಿ ಅವರ ಮೆಹೆಂದಿ ಕಾರ್ಯಕ್ರಮದಲ್ಲಿ ಮದುಮಗಳನ್ನು ಕ್ರೇನ್ ಮೂಲಕ ಭವ್ಯವಾಗಿ ವೇದಿಕೆಗೆ ಕರೆತರುವ ವಿನೂತನ ವ್ಯವಸ್ಥೆ ಮಾಡಲಾಗಿತ್ತು.
ಬಣ್ಣ ಬಣ್ಣದ ಬೆಳಕುಗಳು, ಹೂವಿನ ಅಲಂಕಾರ ಮತ್ತು ಸಂಭ್ರಮದ ನಡುವೆ ಮದುಮಗಳು ಕ್ರೇನ್ ಮೂಲಕ ವೇದಿಕೆಗೆ ಆಗಮಿಸಿದರು. ಕುಟುಂಬಸ್ಥರು, ಬಂಧುಗಳು ಮತ್ತು ಸ್ನೇಹಿತರು ಆ ಕ್ಷಣವನ್ನು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಂಭ್ರಮಿಸಿದರು.
ಇತ್ತೀಚಿನ ಮದುವೆ ಸಂಭ್ರಮಗಳಲ್ಲಿ ಹೊಸತನದ ಟ್ರೆಂಡ್ ಹೆಚ್ಚುತ್ತಿರುವ ನಡುವೆಯೇ, ಹೆಬ್ರಿಯ ಈ ಕಾರ್ಯಕ್ರಮವೂ ವಿಶೇಷ ಆಕರ್ಷಣೆಯಾಯಿತು. ಪರಂಪರೆ ಮತ್ತು ಆಧುನಿಕತೆಯ ಸಂಯೋಜನೆಯೊಂದಿಗೆ ನಡೆದ ಈ ಮೆಹೆಂದಿ ಕಾರ್ಯಕ್ರಮ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದೆ.
ಮದುವೆ ಜೀವನದಲ್ಲಿ ಒಮ್ಮೆ ಮಾತ್ರ ಬರುವ ಅಮೂಲ್ಯ ಕ್ಷಣ. ಅದನ್ನು ಮರೆಯಲಾಗದ ಅನುಭವವಾಗಿಸಬೇಕು ಎಂಬ ಕುಟುಂಬದ ಆಶಯ ಈ ವಿಶಿಷ್ಟ ಆಯೋಜನೆಯಲ್ಲಿ ಸ್ಪಷ್ಟವಾಗಿ ಕಾಣಿಸಿತು.