ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ
Monday, May 25, 2026
ದೇಶದ ಜನತೆಗೆ ಕೇಂದ್ರ ಸರ್ಕಾರ ಬೆಳ್ಳಂಬೆಳಗ್ಗೆ ತೈಲ ಶಾಕ್ ಕೊಟ್ಟಿದೆ. ಸೋಮವಾರ (ಇಂದು) ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ.
ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಮೇಲಿನ ಬೆಲೆಯನ್ನು 3 ರೂ. ವರೆಗೂ ಹೆಚ್ಚಿಸಲಾಗಿದೆ. ಇದು ಕಳೆದ 10 ದಿನಗಳಲ್ಲಿ 4ನೇ ಬಾರಿಗೆ ಮಾಡಿದ ದರ ಏರಿಕೆಯಾಗಿದೆ.ಅಲ್ಲದೇ ಸಿಎನ್‌ಜಿ ಬೆಲೆಯನ್ನ ಪ್ರತಿ ಕೆಜಿಗೆ 1 ರೂ. ಹೆಚ್ಚಿಸಲಾಗಿದ್ದು, ಇದು ಇತ್ತೀಚಿನ ದಿನಗಳಲ್ಲಿ 3ನೇ ಬಾರಿಗೆ ಮಾಡಿದ ದರ ಏರಿಕೆಯಾಗಿದೆ. ಒಟ್ಟು ದರ ಏರಿಕೆ 4 ರೂ. ತಲುಪಿದೆ.