-->
ಪಲಿಮಾರು ಶ್ರೀಗಳಿಗೆ ಕೊಡವೂರು ಮಹಾರುದ್ರ ಯಾಗದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ

ಪಲಿಮಾರು ಶ್ರೀಗಳಿಗೆ ಕೊಡವೂರು ಮಹಾರುದ್ರ ಯಾಗದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ


ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ಅವರ ನೇತೃತ್ವದಲ್ಲಿ  ಮೇ. 14ರಿಂದ 19ರವರೆಗೆ ನಡೆಯಲಿರುವ ಮಹಾ ರುದ್ರ ಯಾಗ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಪಲಿಮಾರು ಮಠಾಧೀಶರಾದ ಪರಮ ಪೂಜ್ಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ನೀಡಿ ಆಹ್ವಾನಿಸಲಾಯಿತು. 

ಪಲಿಮಾರು ಮಠಾಧೀಶರಾದ ಪರಮ ಪೂಜ್ಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರನ್ನು ಮಹಾ ರುದ್ರ ಯಾಗ ಸಮಿತಿ ಸದಸ್ಯರು ಭೇಟಿಯಾಗಿ  ಅಮಂತ್ರಣ ಪತ್ರಿಕೆಯನ್ನು ನೀಡಿ, ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೋರಿಕೊಂಡರು. 

ಈ ಸಂದರ್ಭದಲ್ಲಿ ಮಠಾಧೀಶರು ಕಾರ್ಯಕ್ರಮದ ಮಹತ್ವವನ್ನು ಪ್ರಶಂಸಿಸಿ, ಯಾಗ ಯಶಸ್ವಿಯಾಗಿ ನೆರವೇರಲಿ ಎಂದು ಆಶೀರ್ವದಿಸಿದರು. ಸಮಿತಿ ಸಂಚಾಲಕ ಕೃಷ್ಣಮೂರ್ತಿ ಆಚಾರ್ಯ,ಕೊಡವೂರು ಶ್ರೀ ಶಂಕರನಾರಾಯಣ  ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಕೊಡವೂರು ಮೊದಲಾದವರು ಇದ್ದರು.


  

Ads on article

Advertise in articles 1

advertising articles 2

Advertise under the article