ಉಡುಪಿಯಲ್ಲಿ ಸಿಐಟಿಯು ವತಿಯಿಂದ ಕಾರ್ಮಿಕ ದಿನಾಚರಣೆ
Friday, May 01, 2026
ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಪ್ರಯುಕ್ತ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತ್ರತ್ವದಲ್ಲಿ ಮೇ ದಿನಾಚರಣೆಯನ್ನು ಆಚರಿಸಲಾಯಿತು.
ಉಡುಪಿಯಲ್ಲಿ ಇಂದು ಬೆಳಿಗ್ಗೆ ಉಡುಪಿ ಬಸ್ ನಿಲ್ದಾಣ ಬಳಿಯ ಸಿಐಟಿಯು ಕಛೇರಿ ಯಿಂದ ಕಾರ್ಮಿಕರು ಮೆರವಣಿಗೆ ಮೂಲಕ ಕೆಎಮ್ ಮಾರ್ಗ ವಾಗಿ ಸಾಗಿ ಬಂದು ವಿಮಾ ನೌಕರರ ಲಿಕೋ ಬ್ಯಾಂಕ್ ನ ವಜ್ರ ಮಹೋತ್ಸವ ಸಭಾಂಗಣದಲ್ಲಿ ವಿಚಾರಸಂಕಿರಣ ನಡೆಸಲಾಯಿತು.
ಕಾರ್ಯಕ್ರಮವನ್ನು ಚಿಂತಕ ಹಾಗೂ ಪ್ರಾಧ್ಯಾಪಕ ಪಣಿರಾಜ್ ಉದ್ಘಾಟಿಸಿ ಮಾತನಾಡಿದರು. ಸಿಐಟಿಯು ರಾಜ್ಯ ಉಪಾಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ ವಿಚಾರ ಮಂಡಿಸಿದರು. ವಿಮಾ ನೌಕರರ ಸಂಘ ದ ಕೆ.ವಿಶ್ವನಾಥ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಎಐಟಿಯುಸಿನ ಶಿವಾನಂದ, ಇಂಟಕ್ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷ ಕಿರಣ್ ಹೆಗ್ಡೆ , ಯೂನಿಯನ್ ಬ್ಯಾಂಕ್ ನ ಜಿಲ್ಲಾ ಕಾರ್ಯದರ್ಶಿ ನಾಗೇಶ್ ಕಾಮತ್ ಇದ್ದರು. ಕವಿರಾಜ್. ಎಸ್.ಕಾಂಚನ್ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲಾ ಕಟ್ಟಡ ಸಂಘದ ಮುಖಂಡರಾದ ಸೈಯಾದ್ ಅಲಿ ಧನ್ಯವಾದ ಅರ್ಪಿಸಿದರು.

.jpeg)
