-->
 ಕುಂಜಾಲು ವಿಶ್ವಕೀರ್ತಿ ಶಾಲಾ ಮಕ್ಕಳಿಗೆ 60 ಸಾವಿರ ವೆಚ್ಚದ  ಶಿಕ್ಷಣ ಸಾಮಗ್ರಿಗಳ ವಿತರಣೆ

ಕುಂಜಾಲು ವಿಶ್ವಕೀರ್ತಿ ಶಾಲಾ ಮಕ್ಕಳಿಗೆ 60 ಸಾವಿರ ವೆಚ್ಚದ ಶಿಕ್ಷಣ ಸಾಮಗ್ರಿಗಳ ವಿತರಣೆ


ಮಣಿಪಾಲದ ಲಯನ್ಸ್ ಸಂಸ್ಥೆ, ಮಣಿಪಾಲ ಆಟೋ ಕ್ಲಬ್ ಹಾಗೂ ಮಣಿಪಾಲದ ಶೀಟೋ ರಿಯೂ ಕರಾಟೆ ಅಕಾಡೆಮಿಯ ಆಶ್ರಯದಲ್ಲಿ ಕುಂಜಾಲು ವಿಶ್ವಕೀರ್ತಿ ಶಾಲೆಯ ವಿದ್ಯಾರ್ಥಿಗಳಿಗೆ 2026-27ನೇ ಶೈಕ್ಷಣಿಕ ವರ್ಷದ ಅಂಗವಾಗಿ ಸುಮಾರು 60 ಸಾವಿರ ವೆಚ್ಚದ ನೋಟ್ ಪುಸ್ತಕಗಳು, ಲೇಖನ ಸಾಮಗ್ರಿಗಳು, ಶಾಲಾ ಬ್ಯಾಗ್‌ಗಳು, ರೈನ್‌ಕೋಟ್‌ ಹಾಗೂ ಕೊಡೆಗಳನ್ನು ವಿತರಿಸಲಾಯಿತು.

ಎಂಎಎಚ್‌ಇ (MAHE) ಮಣಿಪಾಲದ ಪ್ರೊಫೆಸರ್ ಡಾ. ಕೈಲೇಶ್ ಪೂಜಾರಿ ಅವರು ಕಾರ್ಯಕ್ರಮದ ಮುಖ್ಯ ದಾನಿಗಳಾಗಿದ್ದರು. ಕಾರ್ಯಕ್ರಮದಲ್ಲಿ ಮಣಿಪಾಲ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಡಾ.ಎಚ್. ಗಣೇಶ ಪೈ, ಶಾಲೆಯ ನಿರ್ವಹಣಾ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಬಾಸ್ರಿ, ಉಪಾಧ್ಯಕ್ಷ ರಮೇಶ್ ಪೂಜಾರಿ ಹಾಗೂ ಸದಸ್ಯರಾದ ಕೃಷ್ಣ ಚೇರ್ಕಾಡಿ, ಮಾಲತಿ, ಸುರೇಶ್, ನಿಖಿಲ್, ಸುಮಾ ಮತ್ತು ಪುನೀತ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಶಾಲೆಯ ಮುಖ್ಯ ಶಿಕ್ಷಕರಾದ ಅಶೋಕ್ ಕುಮಾರ್ ಹಾಗೂ ಶಿಕ್ಷಕಿಯರಾದ ಸುಮನಾ, ಸೌಮ್ಯ, ಸುಮಿತ್ರಾ, ಅಕ್ಷತಾ ಮತ್ತು ಶಶಿಕಲಾ ಕಾರ್ಯಕ್ರಮದ ನಿರ್ವಹಣೆಯಲ್ಲಿ ಸಹಕರಿಸಿದರು.

 

Ads on article

Advertise in articles 1

advertising articles 2

Advertise under the article