-->
 ಗ್ಯಾರಂಟಿ ಯೋಜನೆಗಳಿಗೆ ಮತದಾರರ ಗುರುತು, ದಾಖಲೆ ಕಡ್ಡಾಯ: ಸಿಎಂ ಡಿಕೆಶಿ ಸ್ಪಷ್ಟನೆ

ಗ್ಯಾರಂಟಿ ಯೋಜನೆಗಳಿಗೆ ಮತದಾರರ ಗುರುತು, ದಾಖಲೆ ಕಡ್ಡಾಯ: ಸಿಎಂ ಡಿಕೆಶಿ ಸ್ಪಷ್ಟನೆ


ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಮತ್ತು ಹಣ ಜಮಾ ಪ್ರಕ್ರಿಯೆಯಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಲಾಗುತ್ತಿದ್ದು, ವೋಟ್ ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಲು ಫಲಾನುಭವಿಗಳು ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರಬೇಕು ಹಾಗೂ ಫೋಟೋ ಗುರುತಿನ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು  ಡಿಕೆ ಶಿವಕುಮಾರ್ ಹೇಳಿದ್ದಾರೆ. ಈವರೆಗೆ ಕೆಲ ಪ್ರಕರಣಗಳಲ್ಲಿ ಅರ್ಜಿದಾರರು ತಪ್ಪು ಮೊಬೈಲ್ ಸಂಖ್ಯೆ ಅಥವಾ ಅಸ್ಪಷ್ಟ ಬ್ಯಾಂಕ್ ವಿವರಗಳನ್ನು ನೀಡಿರುವುದರಿಂದ, ಕೆಲವು ಫಲಾನುಭವಿಗಳ ಖಾತೆಗಳಿಗೆ ಹಣ ತಲುಪದೆ ಅನ್ಯ ಖಾತೆಗಳಿಗೆ ವರ್ಗಾವಣೆಗೊಂಡಿರುವ ಘಟನೆಗಳು ಕಂಡುಬಂದಿವೆ ಎಂದು ಅವರು ವಿವರಿಸಿದರು. ಇದನ್ನು ತಡೆಗಟ್ಟಲು ಡೇಟಾ ಪರಿಶೀಲನೆ ಮತ್ತು ಬ್ಯಾಂಕ್ ಖಾತೆ ದೃಢೀಕರಣ ಪ್ರಕ್ರಿಯೆಯನ್ನು ಬಲಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಸೇರಿದಂತೆ ಎಲ್ಲಾ ಗ್ಯಾರಂಟಿ ಯೋಜನೆಗಳ ಹಣ ನೇರವಾಗಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಮಾತ್ರ ಜಮೆಯಾಗಬೇಕು. ಯಾವುದೇ ಗೊಂದಲ ಅಥವಾ ತಪ್ಪು ಪಾವತಿಗೆ ಅವಕಾಶ ಇರಬಾರದು. ಕರ್ನಾಟಕದ ಅರ್ಹ ನಿವಾಸಿಗಳಿಗೆ ಮಾತ್ರ ಗ್ಯಾರಂಟಿ ಯೋಜನೆಗಳ ಲಾಭ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.


Ads on article

Advertise in articles 1

advertising articles 2

Advertise under the article