ಮಣ್ಣಿನ ಆಟ..ಯೋಗದ ಪಾಠ.. ಪೋದಾರ್ ಪ್ರೆಪ್ ನಲ್ಲಿ "ಯೋಗ್ ಇನ್ ಮಡ್" ಹೊಸ ಅನುಭವ
Tuesday, June 30, 2026
ಉಡುಪಿಯ ಪೋದಾರ್ ಪ್ರೆಪ್ ಶಾಲೆಯಲ್ಲಿ ಮಕ್ಕಳಿಗೆ ಪ್ರಕೃತಿಯೊಂದಿಗೆ ಬೆರೆಯುವ ಅಪರೂಪದ ಅನುಭವ ಕಲ್ಪಿಸುವ ಉದ್ದೇಶದಿಂದ "ಯೋಗ್ ಇನ್ ಮಡ್" ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಣ್ಣಿನೊಂದಿಗೆ ಆಟವಾಡುತ್ತಾ ಯೋಗಾಭ್ಯಾಸ ಮಾಡಿದ ಮಕ್ಕಳು ಖುಷಿಪಟ್ಟರೆ, ಪೋಷಕರೂ ಮಕ್ಕಳೊಂದಿಗೆ ಕೈಜೋಡಿಸಿ ಕಾರ್ಯಕ್ರಮವನ್ನು ಮತ್ತಷ್ಟು ವಿಶೇಷಗೊಳಿಸಿದರು.
ಮಕ್ಕಳ ಶಿಕ್ಷಣವು ಕೇವಲ ಪುಸ್ತಕಗಳಿಗೆ ಸೀಮಿತವಾಗಿರದೆ, ಅನುಭವದ ಮೂಲಕವೂ ನಡೆಯಬೇಕು ಎಂಬ ಆಶಯದೊಂದಿಗೆ ಹಮ್ಮಿಕೊಂಡ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮಡ್ ಪ್ಲೇ, ಮುದ್ರಾಸ್ ವಿತ್ ಮಡ್ಡಿ ಹ್ಯಾಂಡ್ಸ್, ಮಡ್ ಬೇಕರಿ, ಮಡ್ ಆರ್ಟ್ ಕ್ರಿಯೇಷನ್ ಹಾಗೂ ಮಡ್ಡಿ ಫೀಟ್ ಸೇರಿದಂತೆ ವಿವಿಧ ಮಣ್ಣಿನ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಮಕ್ಕಳು ಮಣ್ಣಿನೊಂದಿಗೆ ಆಟವಾಡುತ್ತಾ ವಿವಿಧ ಯೋಗಾಸನಗಳನ್ನು ಅಭ್ಯಾಸ ಮಾಡಿ ಸಂಭ್ರಮಿಸಿದರು. ಮಣ್ಣಿನ ಸ್ಪರ್ಶದ ಮೂಲಕ ಕಲಿಯುವ ಅನುಭವ ಮಕ್ಕಳಿಗೆ ಹೊಸತನವನ್ನು ನೀಡಿದರೆ, ಆಟದ ಮೂಲಕ ಕಲಿಕೆಯ ಮಹತ್ವವನ್ನು ಈ ಕಾರ್ಯಕ್ರಮ ಸಾಬೀತುಪಡಿಸಿತು.
ಮಣ್ಣಿನೊಂದಿಗೆ ನೇರ ಸಂಪರ್ಕ ಮಕ್ಕಳಲ್ಲಿ ಸೃಜನಶೀಲತೆ, ಕಲ್ಪನಾ ಶಕ್ತಿ, ಇಂದ್ರಿಯಾನುಭವ ಹಾಗೂ ತಂಡದ ಮನೋಭಾವವನ್ನು ಬೆಳೆಸುವುದರ ಜೊತೆಗೆ ಪ್ರಕೃತಿಯೊಂದಿಗೆ ನಿಕಟ ಬಾಂಧವ್ಯವನ್ನು ಬೆಳೆಸುತ್ತದೆ ಎಂದು ಶಿಕ್ಷಕರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪೋದಾರ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಾಂಶುಪಾಲೆ ನೇತ್ರಾ ಎಚ್, ಪೋದಾರ್ ಪ್ರೆಪ್ ಮುಖ್ಯೋಪಾಧ್ಯಾಯಿನಿ ಗೀತಾ ಲವೀನ್ ಪೂಜಾರಿ, ಆಡಳಿತಾಧಿಕಾರಿ ಹರೀಶ್ ನಾಯ್ಕ್ ಹಾಗೂ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಇಂತಹ ಅನುಭವಾತ್ಮಕ ಚಟುವಟಿಕೆಗಳು ಮಕ್ಕಳ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬೆಳವಣಿಗೆಗೆ ಪೂರಕವಾಗಿದ್ದು, ಶಾಲೆಯ ಕಲಿಕಾ ವಿಧಾನಕ್ಕೆ ಮತ್ತಷ್ಟು ಅರ್ಥಪೂರ್ಣತೆ ನೀಡಿವೆ.
"ಮಣ್ಣು, ಯೋಗ ಮತ್ತು ಆಟದ ಮೂಲಕ ಕಲಿಕೆಯನ್ನು ಮತ್ತಷ್ಟು ಆಸಕ್ತಿದಾಯಕವಾಗಿಸಿದ ಪೋದಾರ್ ಪ್ರೆಪ್‌ನ 'ಯೋಗ್ ಇನ್ ಮಡ್' ಕಾರ್ಯಕ್ರಮ ಮಕ್ಕಳಿಗೆ ಹೊಸ ಅನುಭವ ನೀಡಿತು.

.jpeg)