ಹೆಲ್ಪಿಂಗ್ ಹ್ಯಾಂಡ್ಸ್ ಕಿದಿಯೂರು ವತಿಯಿಂದ ವಿದ್ಯಾರ್ಥಿಗಳಿಗೆ ಊಟದ ತಟ್ಟೆ ವಿತರಣೆ
Friday, June 19, 2026
ಸಮಾಜಸೇವಾ ಸಂಸ್ಥೆಯಾದ ಹೆಲ್ಪಿಂಗ್ ಹ್ಯಾಂಡ್ಸ್ ಕಿದಿಯೂರು ವತಿಯಿಂದ ಕಿದಿಯೂರು ಶಾಲೆಯ 100 ವಿದ್ಯಾರ್ಥಿಗಳಿಗೆ ಊಟದ ಬಟ್ಟಲುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಂತೋಷ್ ಕರ್ಕೇರ, ಗುಂಡು ಬಿ ಅಮೀನ್, ಐರಿನ್ ಅಂದ್ರಾದೆ, ಜಗದೀಶ್ ಕೋಟ್ಯಾನ್, ವಸಂತ್ ಕಿದಿಯೂರು, ರಮೇಶ್ ಕಿದಿಯೂರು, ಶಾಲೆಯ ಮುಖ್ಯೋಪಾಧ್ಯಾಯರಾದ ಸುಮಿತ್ರ, ಪೂರ್ಣಿಮಾ, ಅಧ್ಯಾಪಕ ವೃಂದ ಹಾಗೂ ಹೆಲ್ಪಿಂಗ್ ಹ್ಯಾಂಡ್ಸ್ ಸದಸ್ಯರು ಉಪಸ್ಥಿತರಿದ್ದರು.
