ಹೆಬ್ರಿ ಎಪಿಎಂ ಸಂಸ್ಥೆಯ ಸ್ಥಾಪಕ ದಿ. ಸುಭೋದ್ ಬಲ್ಲಾಳ್ ಪುತ್ರಿ ಮಲ್ಲಿಕಾ ಶೆಟ್ಟಿ ನಿಧನ
Saturday, June 20, 2026
ಉಡುಪಿ ಜಿಲ್ಲೆಯ ಹೆಬ್ರಿಯ ಎಪಿಎಂ ಸಾರಿಗೆ ಸಂಸ್ಥೆಯ ಸ್ಥಾಪಕರಾದ ದಿವಂಗತ ಸುಭೋಧ್ ಬಲ್ಲಾಳ್ ಅವರ ಪುತ್ರಿ ಹಾಗೂ ಖ್ಯಾತ ವೈದ್ಯರಾದ ಡಾ. ಸುಮಂತ್ ಶೆಟ್ಟಿ ಅವರ ಪತ್ನಿ ಮಲ್ಲಿಕಾ ಶೆಟ್ಟಿ ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಮಲ್ಲಿಕಾ ಶೆಟ್ಟಿ ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಶುಕ್ರವಾರ ರಾತ್ರಿ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರು ಪತಿ ಡಾ. ಸುಮಂತ್ ಶೆಟ್ಟಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಸಮಾಜದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮಲ್ಲಿಕಾ ಶೆಟ್ಟಿ ಅವರ ಅಂತ್ಯಕ್ರಿಯೆ ಇಂದು (ಶನಿವಾರ) ಸಂಜೆ ಹೆಬ್ರಿಯಲ್ಲಿ ನಡೆಯಲಿದ್ದು, ಬಂಧು-ಬಳಗ ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.