ಉಡುಪಿ ಪೋದಾರ್ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್‌ನ ಪ್ರಮಾಣ ವಚನ ಸಮಾರಂಭ
ಉಡುಪಿಯ ಪೋದಾರ್ ಅಂತರಾಷ್ಟ್ರಿಯ ಶಾಲೆಯಲ್ಲಿ ನೂತನ ಶಾಲಾ ವಿದ್ಯಾರ್ಥಿ ಸಂಸತ್‌ನ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವು ಪ್ರಾಂಶುಪಾಲೆ ನೇತ್ರಾ ಎಚ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅತಿಥಿಗಳನ್ನು ಶಾಲಾ ವಿದ್ಯಾರ್ಥಿಗಳಿಂದಲೇ ಆಯೋಜಿಸಿದ ವಾದ್ಯಗೋಷ್ಠಿಯೊಂದಿಗೆ ಸ್ವಾಗತಿಸಿ, ದೀಪ ಬೆಳಸುವುದರ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ನೂತನ ಶಾಲಾ ಅಧ್ಯಕ್ಷ ವಿಧಾತ ಜಿ, ಶಾಲಾ ಹೆಡ್ ಬಾಯ್ ನಚಿಕೇತ್ ಎನ್, ಶಾಲಾ ಹೆಡ್ ಗರ್ಲ್ ಕುಮಾರಿ ಧೃತಿ ಆರ್, ಶಾಲಾ ನಾಯಕ ಯತಿಕ್ ಹಾಗೂ ಇತರ ಸಂಸತ್ ಸದಸ್ಯರು ಪದಕದೊಂದಿಗೆ ಪ್ರಮಾಣವಚನ ಸ್ವೀಕರಿಸಿದರು.
ಶಾಲಾ ದಳವನ್ನು ನಾಲ್ಕು ದಳಗಳನ್ನಾಗಿ ವಿಂಗಡಿಸಿ ಜವಾಬ್ದಾರಿಗಳನ್ನು ಹಂಚಲಾಯಿತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಲಾ ಪ್ರಾಂಶುಪಾಲರಾದ ನೇತ್ರಾ ಎಚ್. ಅವರು,
ನಾಯಕತ್ವದ ಗುಣಗಳು, ಶಿಸ್ತು ಮತ್ತು ಜವಾಬ್ದಾರಿಯ ಮಹತ್ವವನ್ನು ವಿವರಿಸಿ, ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ತಮ ನಾಯಕರಾಗಿ ರೂಪುಗೊಳ್ಳುತ್ತಾರೆಂದು ತಿಳಿಸಿದರು. ಶಾಲಾ ವಿದ್ಯಾರ್ಥಿಗಳ ಹಾಡು ಹಾಗೂ ನೃತ್ಯಗಳು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿದವು.ಪವಿತ್ರ ನಾಯಕ್, ಅಧೀಶ್ ಜಿ ಹೆಗ್ಡೆ , ಶ್ರವ್ಯ, ಸಮನ್ಯು ಕಾರ್ಯಕ್ರಮವನ್ನು ನಿರೂಪಿಸಿದರು. ಇನ್ಶಾ ರಿಜ್ವಾನ್, ಸ್ವಾಗತಿಸಿ, ಕೇಶರ್ ಶರ್ಮಾ ವಂದಿಸಿದರು. ಕಾರ್ಯಕ್ರಮದಲ್ಲಿ ಪೋದರ್ ಪ್ರೆಪ್ ಮುಖ್ಯಶಿಕ್ಷಕಿ ಗೀತಾ ಲವಿನ್ ಪೂಜಾರಿ, ಶಾಲೆಯ ಆಡಳಿತಾಧಿಕಾರಿ ಹರೀಶ್ ನಾಯಕ್, ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಹಾಗೂ ಪೋಷಕರು ಉಪಸ್ಥಿತರಿದ್ದರು.