-->
ಉಡುಪಿ ಹೃದಯಭಾಗದಲ್ಲಿದ್ದ ತ್ಯಾಜ್ಯ ರಾಶಿಗೆ ಕೊನೆಗೂ ಮುಕ್ತಿ

ಉಡುಪಿ ಹೃದಯಭಾಗದಲ್ಲಿದ್ದ ತ್ಯಾಜ್ಯ ರಾಶಿಗೆ ಕೊನೆಗೂ ಮುಕ್ತಿ


ಉಡುಪಿ ನಗರದ ಹೃದಯಭಾಗದಲ್ಲಿರುವ ಹಳೆ ಸರ್ಕಾರಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಿದ್ದ ಸ್ಥಳದಲ್ಲಿದ್ದ ಗಿಡಗಂಟಿಗಳು ಹಾಗೂ  ಕಸ ತ್ಯಾಜ್ಯಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ.

ಸ್ಥಳದಲ್ಲಿದ್ದ ತಗಡು ತಡೆಬೇಲಿ ಮತ್ತು ಆವರಣ ಗೋಡೆಯ ನಡುವಿನ ಜಾಗದಲ್ಲಿ ಭಾರಿ ಪ್ರಮಾಣದಲ್ಲಿ ಕಸ ತ್ಯಾಜ್ಯಗಳು ಸಂಗ್ರಹಗೊಂಡಿದ್ದು, ಕೊಳೆತು ದುರ್ವಾಸನೆ ಹರಡುತ್ತಿತ್ತು. ಅವ್ಯವಸ್ಥೆ ಬಗ್ಗೆ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ್ ಮೇಸ್ತ ಶಿರೂರು ಅವರು ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ತ್ಯಾಜ್ಯಗಳ ವಿಲೇವಾರಿ ನಡೆದಿದೆ. 

 ಸಂಗ್ರಹವಾಗಿದ್ದ ಕಸ ತ್ಯಾಜ್ಯಗಳನ್ನು ತೆರವುಗೊಳಿಸಿ ವಿಲೇವಾರಿಗೊಳಿಸುವ ಕೆಲಸ ನಡೆದಿದೆ . ಈ ಮೂಲಕ ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.



Ads on article

Advertise in articles 1

advertising articles 2

Advertise under the article