-->
ಎಸ್ಐಆರ್ ಎಂಬುವುದು ಕಾಂಗ್ರೆಸ್ ಮತದಾರರನ್ನು ಹೊರಗಿಡುವ ಹುನ್ನಾರ: ಬಿಕೆ ಹರಿಪ್ರಸಾದ್

ಎಸ್ಐಆರ್ ಎಂಬುವುದು ಕಾಂಗ್ರೆಸ್ ಮತದಾರರನ್ನು ಹೊರಗಿಡುವ ಹುನ್ನಾರ: ಬಿಕೆ ಹರಿಪ್ರಸಾದ್


ಎಸ್ಐಆರ್ ಎಂಬುವುದು ಕಾಂಗ್ರೆಸ್ ನ ಮತದಾರರು, ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು, ಬುಡಕಟ್ಟು ಜನಾಂಗದ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ಬಿಜೆಪಿಯವರ ಹುನ್ನಾರ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಆರೋಪಿಸಿದ್ದಾರೆ.


ಅವರು ಮಂಗಳೂರು ಟೌನ್ ಹಾಲ್ ನಲ್ಲಿ ದ.ಕ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಬೂತ್ ಮಟ್ಟದ ಚುನಾವಣಾ ಏಜೆಂಟರುಗಳ ಸಭೆ ಹಾಗೂ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರುಗಳಿಗೆ ಎಸ್ಐಆರ್ ಬಗ್ಗೆ ಜನ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. 


ಪ್ರಥಮ ಹಂತವಾಗಿ ಜೂನ್. 30ರಿಂದ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಎಸ್ಐಆರ್ ಕುರಿತ ಅರ್ಜಿ ನಮೂನೆಯನ್ನು ನೀಡಲಿದ್ದಾರೆ. ಆ ಅರ್ಜಿ ನಮೂನೆಯಲ್ಲಿ ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು, ಮತದಾರರೆಲ್ಲರ ಹೆಸರನ್ನು ನೋಂದಾಯಿಸುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಮತಗಟ್ಟೆ ಏಜೆಂಟರುಗಳ ಮೇಲಿದೆ. ಮತಗಟ್ಟೆ ಅಧಿಕಾರಿಗಳು ಯಾವುದೇ ಮನೆಗೆ ಇಂಥ ಅರ್ಜಿ ನಮೂನೆಯನ್ನು ವಿತರಿಸದೇ ಇದ್ದರೂ ಮತಗಟ್ಟೆ ಏಜೆಂಟರುಗಳು ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಅರ್ಜಿ ನಮೂನೆ ವಿತರುಸುವಂತೆ ನೋಡಿಕೊಳ್ಳಬೇಕಿದೆ ಎಂದು ಅವ್ರು ಹೇಳಿದರು. ಮತಗಟ್ಟೆ ಏಜೆಂಟರು ನೀಡುವ ಈ ಸೇವೆ ದೇಶ ಉಳಿಸುವ ನಿಟ್ಟಿನಲ್ಲಿ ಒಂದು ಮಹತ್ತರ ಹೆಜ್ಜೆಯಾಗಲಿದೆ ಎಂದು ಅವರು ಹೇಳಿದರು. 


ಆರೋಗ್ಯ ಸಚಿವ ಯು.ಟಿ ಖಾದರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಕಾಂಗ್ರೆಸ್ ಪ್ರಮುಖರಾದ ಐವನ್ ಡಿಸೋಜಾ, ರಮಾನಾಥ ರೈ, ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮತ್ ಗೌಡ ಹಾಗೂ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಎಸ್ಐಆರ್ ಬಗ್ಗೆ ತರಬೇತಿ ಹಾಗೂ ಜಾಗೃತಿ ಮೂಡಿಸಲು ರಚಿಸಲಾದ ತಂಡದ ಮುಖ್ಯಸ್ಥ ವಿ.ಆರ್ ಸುದರ್ಶನ್ ಹಾಗೂ ಜಯಪ್ರಕಾಶ್ ಹೆಗ್ಡೆ ಉಪಸ್ಥಿತರಿದ್ದರು.  




Ads on article

Advertise in articles 1

advertising articles 2

Advertise under the article