-->
 ಮದ್ಯಪಾನ ಮಾಡಿ ಕಾರು ಚಲಾಯಿಸಿ ಸ್ಕೂಟಿಗೆ ಡಿಕ್ಕಿ: ಆರೋಪಿಗೆ ನ್ಯಾಯಾಂಗ ಬಂಧನ

ಮದ್ಯಪಾನ ಮಾಡಿ ಕಾರು ಚಲಾಯಿಸಿ ಸ್ಕೂಟಿಗೆ ಡಿಕ್ಕಿ: ಆರೋಪಿಗೆ ನ್ಯಾಯಾಂಗ ಬಂಧನ


ಮದ್ಯಪಾನ ಮಾಡಿ ಅಜಾಗರೂಕತೆಯಿಂದ ಕಾರು ಚಲಾಯಿಸಿ ಸ್ಕೂಟಿಗೆ ಡಿಕ್ಕಿ ಹೊಡೆದು ಯುವಕನಿಗೆ ಗಂಭೀರ ಗಾಯಗೊಳಿಸಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜೂನ್ 19ರಂದು ರಾತ್ರಿ ಸುಮಾರು 10.08 ಗಂಟೆಗೆ ಮಣಿಪಾಲದ ಸಾಯಿಸಾಗರ್ ಹೋಟೆಲ್ ಮುಂಭಾಗದ ಯು-ಟರ್ನ್ ಬಳಿ ಈ ಅಪಘಾತ ಸಂಭವಿಸಿತ್ತು. ಅಲೆವೂರು ಗ್ರಾಮದ ಕರ್ವಾಲು ನಿವಾಸಿ ಅಭಿಷೇಕ್ ನಾಯಕ್ (21) ಅವರು ತಮ್ಮ ಸ್ಕೂಟಿಯಲ್ಲಿ ಮಣಿಪಾಲದಿಂದ ಕೆಳಪರ್ಕಳದ ಮನೆಗೆ ತೆರಳುತ್ತಿದ್ದ ವೇಳೆ, ಮಣಿಪಾಲ ಎಂಐಟಿ ಕಡೆಯಿಂದ ವೇಗವಾಗಿ ಬಂದ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಭಿಷೇಕ್ ನಾಯಕ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಸ್ಕೂಟಿ ಹಾಗೂ ಕಾರು ಜಖಂಗೊಂಡಿತ್ತು.

ಪ್ರಕರಣದ ತನಿಖೆ ನಡೆಸಿದ ಮಣಿಪಾಲ ಪೊಲೀಸರು, ಕಾರು ಚಾಲಕ ಕಾರ್ಕಳ ನಿವಾಸಿ ಸಮೇಗ್ದ್ ಎಲ್.ಜೆ. (25) ಬಂಧಿಸಿದ್ದರು. ಈತ ಮದ್ಯಪಾನ ಮಾಡಿ ವಾಹನ ಚಲಾಯಿಸಿರುವುದು ದೃಢಪಟ್ಟಿತ್ತು. ಆರೋಪಿಯನ್ನು ಜೂನ್ 22ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. 


 

Ads on article

Advertise in articles 1

advertising articles 2

Advertise under the article