-->
ತೆಂಗಿನಕಾಯಿ ತಲೆಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಒಂದೂವರೆ ವರ್ಷದ ಮಗು ಸಾವು

ತೆಂಗಿನಕಾಯಿ ತಲೆಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಒಂದೂವರೆ ವರ್ಷದ ಮಗು ಸಾವು


ತಲೆ ಮೇಲೆ ತೆಂಗಿನಕಾಯಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಒಂದೂವರೆ ವರ್ಷದ ಕಂದಮ್ಮ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೇರಂಜೆ ಎಂಬಲ್ಲಿ ನಡೆದಿದೆ. 

ಬ್ರಹ್ಮಾವರದ ಪ್ರಶಾಂತ್- ಸುಚಿತ್ರಾ ದಂಪತಿ ಪುತ್ರ ದಕ್ಷ್ ಮೃತಪಟ್ಟ ಮಗು. ಸುಚಿತ್ರಾ ಅವರು ಮಂಗಳವಾರ ತನ್ನ 6 ವರ್ಷದ ಮಗಳನ್ನು ಸ್ಕೂಲ್ ಬಸ್ಸಿಗೆ ಬಿಡಲು ಮಗುವನ್ನೆತ್ತಿಕೊಂಡು ಬಂದಿದ್ದರು. ಬಸ್ ಬರುವ ಜಾಗಕ್ಕೆ 250 ಮೀಟರ್ ಗದ್ದೆಯಲ್ಲಿ ನಡೆದುಕೊಡು ಬರುತ್ತಿದ್ದ ವೇಳೆ ತೆಂಗಿನಕಾಯಿ ಮಗುವಿನ ತಲೆ ಮೇಲೆ ಬಿದ್ದಿದೆ. ತಲೆ ಮೇಲೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಣಿಪಾಲ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ನಡೆಸಿತಾದರೂ ಮಗುವನ್ನು ಬದುಕಿಸಲಾಗಿಲ್ಲ. 

Ads on article

Advertise in articles 1

advertising articles 2

Advertise under the article