ಸುಳ್ಯದ ಹೆಸರಾಂತ ವೈದ್ಯ ಡಾ. ರವಿಶಂಕರ್ ಭಟ್ ಪುತ್ರಿ ಅಭಿಜ್ಞಾ ಭಟ್ ನಿಧನ
Thursday, June 11, 2026
ಸುಳ್ಯದ ಹೆಸರಾಂತ ಇಎನ್‌ಟಿ ವೈದ್ಯರಾದ ಡಾ. ರವಿಶಂಕರ್ ಭಟ್ ಅವರ ಹಿರಿಯ ಪುತ್ರಿ ಕು. ಅಭಿಜ್ಞಾ ಭಟ್ (19) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಜೂನ್ 10ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅಭಿಜ್ಞಾ ಭಟ್ ಅವರು ಇತ್ತೀಚೆಗೆ ಪಿಯುಸಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದು, 596 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ರ್ಯಾಂಕ್ ಗಳಿಸುವ ಮೂಲಕ ಗಮನ ಸೆಳೆದಿದ್ದರು. ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಶಿಕ್ಷಕರು, ಸಹಪಾಠಿಗಳು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಅವರ ಅಕಾಲಿಕ ನಿಧನವು ಕುಟುಂಬ ವರ್ಗದವರಲ್ಲದೆ ಶಿಕ್ಷಣ ಕ್ಷೇತ್ರ ಹಾಗೂ ಸುಳ್ಯ ಭಾಗದ ಜನರಲ್ಲಿ ದುಃಖದ ಛಾಯೆ ಮೂಡಿಸಿದೆ.
ಮೃತರು ತಂದೆ ಡಾ. ರವಿಶಂಕರ್ ಭಟ್, ತಾಯಿ ಅನುಪಮ, ಸಹೋದರಿ ಕು. ಅನುಜ್ಞ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಅಭಿಜ್ಞಾ ಭಟ್ ಅವರ ನಿಧನಕ್ಕೆ ವಿವಿಧ ಗಣ್ಯರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ.