ಉಡುಪಿಯ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಮಾರಾಮಾರಿ (Video)
Tuesday, June 09, 2026
ವಾಹನಕ್ಕೆ ಸೈಡ್ ಕೊಡುವ ವಿಚಾರಕ್ಕೆ ಸಂಬಂಧಿಸಿ ಆಂಧ್ರ ಮೂಲದ ಪ್ರವಾಸಿಗರು ಹಾಗು ಉಡುಪಿ ಮೂಲದ ಕಾರು ಚಾಲಕನ ನಡುವೆ ಮಾರಾಮಾರಿ ನಡೆದ ಘಟನೆ ಉಡುಪಿಯ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಡೆದಿದೆ.
ವಾಹನಕ್ಕೆ ಸೈಡ್ ಕೊಡುವ ವಿಚಾರಕ್ಕೆ ವಾಗ್ವಾದ ನಡೆದಿದ್ದು, ಚಾಲಕ ಕಾರು ನಿಲ್ಲಿಸದೇ ತೆರಳುತ್ತಿದ್ದ ವೇಳೆ ಆಕ್ರೋಶಗೊಂಡ ಪ್ರವಾಸಿಗನೋರ್ವ ಕಾರಿಗೆ ಕೋಲಿನಿಂದ ಹೊಡೆದಿದ್ದ. ಇದರಿಂದ ಆಕ್ರೋಶಗೊಂಡ ಕಾರು ಚಾಲಕ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾನೆ. ತಡೆಯಲು ಬಂದ ಪ್ರವಾಸೀ ಮಹಿಳೆಯ ಮೇಲೆಯೂ ಹಲ್ಲೆ ನಡೆಸಲಾಗಿದೆ. ಹೀಗಾಗಿ ಕೆಲ ಕಾಲ ಮಾರಾಮಾರಿ ನಡೆದಿದ್ದು, ಸ್ಥಳೀಯರು ಹಾಗೂ ಸಾರ್ವಜನಿಕರು ಮಧ್ಯಪ್ರವೇಶಿಸಿ ತಡೆದಿದ್ದಾರೆ. ಕಾರು ಚಾಲಕನ ಮೇಲೆ ಆಕ್ರೋಶ ವ್ಯಕ್ತವಾಗಿದೆ. ಎರಡೂ ಕಡೆಯವರನ್ನು ಉಡುಪಿ ನಗರ ಠಾಣೆಗೆ ಕರೆಸಲಾಗಿದೆ.