ಮಂಗಳೂರಿನ ನಾಗುರಿಯಲ್ಲಿ ದರೆ ಕುಸಿತ: ತಾಯಿ, ಮಕ್ಕಳ ಸಹಿತ ಮೂವರ ಸಾವು, ಇತರ ಮೂವರ ರಕ್ಷಣೆ
Wednesday, July 01, 2026
ಮಂಗಳೂರಿನ ನಾಗುರಿಯಲ್ಲಿ ಇಂದು (ಬುಧವಾರ) ಸಂಭವಿಸಿದ ಭೂಕುಸಿತದಲ್ಲಿ ಮಹಿಳೆ ಮತ್ತು ಇಬ್ಬರು ಹೆಣ್ನು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
ಮೃತರನ್ನು ಶಾಂತಾ (46), ಅನಾಮಿಕ (8) ಮತ್ತು ಪರಿ (4) ಎಂದು ಗುರುತಿಸಲಾಗಿದೆ.
ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹಂಚಿನ ಮನೆಯ ಮೇಲೆ ಈ ಭೂಕುಸಿತ ಸಂಭವಿಸಿದೆ.
ಎನ್‌ಡಿಆರ್‌ಎಫ್ ಸಿಬ್ಬಂದಿ ಹಾಗೂ ರಕ್ಷಣಾ ಕಾರ್ಯಕರ್ತರು ಅವಶೇಷಗಳಡಿ ಸಿಲುಕಿದ್ದ ವ್ಯಕ್ತಿಯೋರ್ವರನ್ನು ಮತ್ತು ಇಬ್ಬರು ಬಾಲಕಿಯರನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮೃತರು ಹಾಗೂ ರಕ್ಷಿಸಲ್ಪಟ್ಟ ಗಾಯಾಳುಗಳು ಬಿಹಾರ ಮೂಲದವರಾಗಿದ್ದು, ಕಟ್ಟಡ ನಿರ್ಮಾಣ ಕಾಮಗಾರಿಗೆಂದು ಇಲ್ಲಿ ವಾಸವಿದ್ದರೆಂದು ತಿಳಿದು ಬಂದಿದೆ.