-->
ನಗರಸಭೆಯ ನಿವೃತ್ತ ಕಂದಾಯ ಅಧಿಕಾರಿ ಡಿ. ಪಿ. ಕುಮಾರ್ (ಗೋಪಾಲಣ್ಣ) ನಿಧನ

ನಗರಸಭೆಯ ನಿವೃತ್ತ ಕಂದಾಯ ಅಧಿಕಾರಿ ಡಿ. ಪಿ. ಕುಮಾರ್ (ಗೋಪಾಲಣ್ಣ) ನಿಧನ


ಉಡುಪಿ ನಗರಸಭೆಯ ನಿವೃತ್ತ ಕಂದಾಯ ಅಧಿಕಾರಿ ಡಿ. ಪಿ. ಕುಮಾರ್ (77) ಅವರು ಅಲ್ಪ ಕಾಲದ ಅಸೌಖ್ಯದ ಬಳಿಕ ಭಾನುವಾರ (ನಿನ್ನೆ) ಉಡುಪಿ ಚಿಟ್ಪಾಡಿಯ ಭಾಗ್ಯಮಂದಿರದ ತಮ್ಮ ಸ್ವಗೃಹದಲ್ಲಿ ನಿಧನರಾದರು. 

ಇಂದಿರಾ ನಗರದ ಯುಬಿಎಂ ಕ್ರಿಸ್ತ ಕಾರುಣ್ಯ ಚರ್ಚಿನ ಸದಸ್ಯರಾಗಿದ್ದ ಡಿ.ಪಿ. ಕುಮಾರ್ ಅವರು ನಗರಸಭೆಯ ಸೇವೆಯಲ್ಲಿ ಗೋಪಾಲಕೃಷ್ಣ ಹಾಗೂ ಗೋಪಾಲಣ್ಣ ಎಂದೇ ಚಿರಪರಿಚಿತರಿದ್ದರು. 

ಮೃತರು ಪತ್ನಿ ಐವಿ ಶಕುಂತಲಾ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ. 

ಮೃತರ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆ ಬಳಿಕ ಉಡುಪಿ ಸಿಮೆಟ್ರಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Ads on article

Advertise in articles 1

advertising articles 2

Advertise under the article