-->
ಪ್ರಗತಿಪರ ಕೃಷಿಕ, ಮಾರ್ಪಳ್ಳಿ ದೇವಸ್ಥಾನ ಟ್ರಸ್ಟಿ ಎಂ.ಮಧುಸೂದನ ಭಟ್ ನಿಧನ

ಪ್ರಗತಿಪರ ಕೃಷಿಕ, ಮಾರ್ಪಳ್ಳಿ ದೇವಸ್ಥಾನ ಟ್ರಸ್ಟಿ ಎಂ.ಮಧುಸೂದನ ಭಟ್ ನಿಧನ


ಉಡುಪಿಯ ಪ್ರಗತಿಪರ ಕೃಷಿಕ ಹಾಗೂ ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ–ಮಹಾಗಣಪತಿ ದೇವಸ್ಥಾನದ ಟ್ರಸ್ಟಿಯಾಗಿದ್ದ ಎಂ. ಮಧುಸೂದನ ಭಟ್ (83) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಧಾರ್ಮಿಕ, ಸಾಮಾಜಿಕ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಅನಂತ ಪದ್ಮನಾಭ ಬಳಗದ ಚಟುವಟಿಕೆಗಳಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. ತಮ್ಮ ಸರಳ ವ್ಯಕ್ತಿತ್ವ, ಸಮಾಜಸೇವಾ ಮನೋಭಾವ ಮತ್ತು ಜನಸ್ನೇಹದಿಂದ ಅವರು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು.

ಇವರು ಈ ಹಿಂದೆ ಕುಕ್ಕಿಕಟ್ಟೆಯಲ್ಲಿ ಅಭ್ಯುದಯ ಪ್ರಿಂಟರ್ಸ್ ನಡೆಸಿ ಮುದ್ರಣ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪತ್ರಿಕಾ ಏಜೆಂಟ್ ಎಂ. ಹರಿಶ್ಚಂದ್ರ ಭಟ್, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಸ್ಥಳೀಯ ಗಣ್ಯರು, ಧಾರ್ಮಿಕ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article