-->
 ಅಲೆವೂರು ಶಾಂತಿನಿಕೇತನ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಪ್ರದಾನ

ಅಲೆವೂರು ಶಾಂತಿನಿಕೇತನ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಪ್ರದಾನ


ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರೋಟರಿ ಐಸಿರಿ ಪರ್ಕಳ ಪ್ರಾಯೋಜಿತ ಇಂಟರಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಜುಲೈ 11ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.

ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3182ರ Teacher Support Committee ಜಿಲ್ಲಾ ಸಭಾಪತಿ  ಎ. ಗಣೇಶ್ ಅವರು ಪದಪ್ರದಾನ ಅಧಿಕಾರಿಯಾಗಿ ನೂತನ ಅಧ್ಯಕ್ಷೆ ಮೋಕ್ಷಾ ಎಸ್.ಪಿ., ಕಾರ್ಯದರ್ಶಿ ಧೃತಿ ಸತೀಶ್ ಶೆಟ್ಟಿ ಹಾಗೂ ತಂಡಕ್ಕೆ ಪದಪ್ರದಾನ ನೆರವೇರಿಸಿದರು.

ಬಳಿಕ ಮಾತನಾಡಿದ ಎ. ಗಣೇಶ್ ಅವರು, Desire, Determination, Dedication, Discipline ಮತ್ತು Direction ಎಂಬ ಐದು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು.

ರಾಜೇಶ್ ಡಿ. ಶೆಣೈ ಅವರು ಇಂಟರಾಕ್ಟ್ ಕ್ಲಬ್‌ನ ಉದ್ದೇಶ ಹಾಗೂ ವಿದ್ಯಾರ್ಥಿಗಳಿಗೆ ದೊರೆಯುವ ನಾಯಕತ್ವ ಮತ್ತು ಸೇವಾ ಅವಕಾಶಗಳ ಕುರಿತು ಮಾಹಿತಿ ನೀಡಿದರು. ರೋಟರಿ ಐಸಿರಿ ಅಧ್ಯಕ್ಷ ಸಂದೀಪ್ ಕುಮಾರ್ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಕ್ಲಬ್‌ನ ಎಲ್ಲ ಚಟುವಟಿಕೆಗಳಿಗೆ ರೋಟರಿ ಐಸಿರಿಯ ಸಂಪೂರ್ಣ ಸಹಕಾರದ ಭರವಸೆ ನೀಡಿದರು.

ಶಾಲೆಯ ಉಪಪ್ರಾಂಶುಪಾಲೆ ಹಾಗೂ ಇಂಟರಾಕ್ಟ್ ಸಂಯೋಜಕಿ ಸುಮನಾ ಬಿ.ಆರ್., ನಿರ್ಗಮನ ಅಧ್ಯಕ್ಷೆ ಕುಮಾರಿ ಮಾನ್ಯ ಎಸ್.ನಾಯಕ್ ಹಾಗೂ ಕಾರ್ಯದರ್ಶಿ ಕುಮಾರಿ ಹರ್ಷಾ ಮೂಲ್ಕಿ ಉಪಸ್ಥಿತರಿದ್ದರು.

ಶಾಲಾ ಪ್ರಾಂಶುಪಾಲೆ ರೂಪಾ ಡಿ. ಕಿಣಿ ಸ್ವಾಗತಿಸಿದರು. ರೋಟರಿ ಐಸಿರಿ ಇಂಟರಾಕ್ಟ್ ಸಭಾಪತಿ ವೆಂಕಟೇಶ್ ಭಟ್ ಕೆ.ಎಂ. ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article