ಕುಂದಾಪುರ: ಕೋಳಿ ಅಂಕಕ್ಕೆ ದಾಳಿ: ಐವರ ಬಂಧನ- ನಗದು, ವಾಹನ ವಶ
Wednesday, July 15, 2026
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊರ್ಗಿ ಗ್ರಾಮದ ಮಣೂರುಮನೆ ಸರ್ಕಾರಿ ಹಾಡಿ ಪ್ರದೇಶದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ದಾಳಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಜುನಾಥ, ಸುಕ್ಷಯ್, ಶರಣ, ರಮೇಶ ಹಾಗೂ ರಜತ ಬಂಧಿತರು. ಆರೋಪಿಗಳಿಂದ 2 ಕೋಳಿಗಳು, ಮೂರು ಸ್ಕೂಟಿ ಸಹಿತ 1,600 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.