-->
ಗೋವಾದಲ್ಲಿ ಮಲ್ಪೆಯ ಸಂದೀಪ್ ಸಾಲ್ಯಾನ್ ನಿಗೂಢ ಸಾವು ಪ್ರಕರಣ: ಮಂಗಳೂರು ಮೂಲದ ಯುವತಿಯ ಬಂಧನ

ಗೋವಾದಲ್ಲಿ ಮಲ್ಪೆಯ ಸಂದೀಪ್ ಸಾಲ್ಯಾನ್ ನಿಗೂಢ ಸಾವು ಪ್ರಕರಣ: ಮಂಗಳೂರು ಮೂಲದ ಯುವತಿಯ ಬಂಧನ


ಗೋವಾ ನಗರದ ಕ್ಯಾಲಂಗಟ್ ಬೀಚ್ ನ ರೆಸಾರ್ಟ್ ನಲ್ಲಿ ಮಲ್ಪೆ ಮೂಲದ ಸಂದೀಪ್ ಸಾಲ್ಯಾನ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಗೋವಾ ಪೊಲೀಸರು ಮಂಗಳೂರು ಮೂಲದ ಮಹಿಳೆಯನ್ನು ಬಂಧಿಸಿದ್ದಾರೆ.


ಮಂಗಳೂರು ಮೂಲದ ಅಕ್ಷತಾ ಬಂಧಿತ ಮಹಿಳೆ. 

ಕೊಲೆಯಾದ ಸಂದೀಪ್ ಸಾಲ್ಯಾನ್ ಉಡುಪಿ ಜಿಲ್ಲೆಯ ಮಲ್ಪೆಯ ನಿವಾಸಿಯಾಗಿದ್ದು, ಕೆಲವೇ ದಿನಗಳ ಹಿಂದೆಯಷ್ಟೇ ಗೋವಾಕ್ಕೆ ಪ್ರಯಾಣ ಬೆಳೆಸಿದ್ದರು. ಆ ಬಳಿಕ ಕಳಂಗೂಟ್‌ನಲ್ಲಿರುವ ಅತಿಥಿ ಗೃಹವೊಂದರಲ್ಲಿ ಸಂದೀಪ್ ಅವರು ಶಂಕಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದು ಕೊಲೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು.

ಸದ್ಯ ಪ್ರಕರಣದ ಪ್ರಮುಖ ಆರೋಪಿ ಅಕ್ಷತಾಳನ್ನು ಬಂಧಿಸಿರುವ ಪೊಲೀಸರು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article