-->
 ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗುರು ಪೂರ್ಣಿಮೆ, ಲಕ್ಷ ತುಳಸಿ ಅರ್ಚನೆ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗುರು ಪೂರ್ಣಿಮೆ, ಲಕ್ಷ ತುಳಸಿ ಅರ್ಚನೆ


ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶ್ರೀ ಗುರು ಪೂರ್ಣಿಮೆ ಪ್ರಯುಕ್ತ  ಲೋಕಕಲ್ಯಾಣಾರ್ಥ  ​ಶ್ರೀ ನಾರಾಯಣಗುರು ವೈದಿಕ ಸಮಿತಿ ಮಂಗಳೂರು ಸಹಕಾರದಲ್ಲಿ ಲಕ್ಷ ತುಳಸಿ ಅರ್ಚನೆ ನೆರವೇರಿತು. 


ಬೆಳಗ್ಗೆ ಗುರು ಪ್ರಾರ್ಥನೆ, ವಿಶ್ವಶಾಂತಿ ಹೋಮ, ಲಕ್ಷ ತುಳಸಿ ಅರ್ಚನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು. ನೂರಾರು ಭಕ್ತರು ಲಕ್ಷ ತುಳಸಿ ಅರ್ಚನೆಯಲ್ಲಿ ತೊಡಗಿಸಿಕೊಂಡರು. ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಟ್ರಸ್ಟಿಗಳಾದ ಕೃತೀನ್ ಧೀರಜ್ ಅಮೀನ್, ಕಿಶೋರ್ ದಂಡೆಕೇರಿ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಸದಸ್ಯರಾದ ಲೀಲಾಕ್ಷ ಕರ್ಕೇರ, ಚಂದನ್‌ದಾಸ್, ವಾಸುದೇವ ಕೋಟ್ಯಾನ್, ಶೈಲೇಂದ್ರ ಸಿ ಸುವರ್ಣ,  ಪ್ರಮುಖರಾದ ಧರ್ಮರಾಜ ಅಮ್ಮುಂಜೆ, ಜಯರಾಮ ಗೌಡ ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article