ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಮುತ್ತೈದೆಯರಿಂದ ಹೊಸ್ತಿಲು ಪೂಜೆ
Wednesday, July 29, 2026
ಉಡುಪಿ ಶ್ರೀ ಕೃಷ್ಣ ಮಠ, ಪರ್ಯಾಯ ಶೀರೂರು ಮಠದ ಆಶ್ರಯದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಸಂಪ್ರದಾಯಬದ್ಧವಾಗಿ ಹೊಸ್ತಿಲು ಪೂಜೆ ಭಕ್ತಿಭಾವದಿಂದ ನೆರವೇರಿತು.
ಈ ವಿಶೇಷ ಪೂಜೆಯಲ್ಲಿ ಮುತ್ತೈದೆಯರು ಭಾಗವಹಿಸಿ, ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಹೊಸ್ತಿಲು ಪೂಜೆಯನ್ನು ನೆರವೇರಿಸಿ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಮಠದ ಸಂಪ್ರದಾಯದಂತೆ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.