-->
ಡಿ.ಕೆ. ಶಿವಕುಮಾರ್ ಸರಕಾರದ ಮೊದಲ ವಿಕೆಟ್ ಪತನ: ಬಿ. ನಾಗೇಂದ್ರ ರಾಜೀನಾಮೆ

ಡಿ.ಕೆ. ಶಿವಕುಮಾರ್ ಸರಕಾರದ ಮೊದಲ ವಿಕೆಟ್ ಪತನ: ಬಿ. ನಾಗೇಂದ್ರ ರಾಜೀನಾಮೆ


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಇತ್ತೀಚೆಗಷ್ಟೇ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆಗೊಂಡಿದ್ದ ಅಂಕಿ ಅಂಶ ಖಾತೆ ಸಚಿವ ನಾಗೇಂದ್ರ ಶುಕ್ರವಾರ ಅಧಿಕೃತವಾಗಿ ರಾಜಿನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ ಡಿ.ಕೆ. ಶಿವಕುಮಾರ್ ಸಂಪುಟದ ಮೊದಲ ವಿಕೆಟ್ ಪತನವಾದಂತಾಗಿದೆ.

ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿ. ನಾಗೇಂದ್ರ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ನಾಗೇಂದ್ರ ಅವರು ಭಾವುಕರಾಗಿ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಗೇಂದ್ರ ಪ್ರತಿಪಕ್ಷಗಳು ಕುತಂತ್ರ ರಾಜಕಾರಣ ಮಾಡುತ್ತಿವೆ. ನೋಟಿಸ್ ಕೊಟ್ಟು ಚರ್ಚೆಗೆ ಬನ್ನಿ ಎಂದರೂ ಒಪ್ಪದೇ, ಬರ, ಕಾವೇರಿ ಸಮಸ್ಯೆಗಳ ಚರ್ಚೆ ಮಾಡಲಿಲ್ಲ. ದಲಿತರು, ಆದಿವಾಸಿಗಳು ಮಂತ್ರಿಗಳಾಗಬಾರದು ಎಂಬ ತಂತ್ರ ಮಾಡ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ನೈತಿಕವಾಗಿ ಬೆಂಬಲಿಸಿದ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದರು.

Ads on article

Advertise in articles 1

advertising articles 2

Advertise under the article