ಮಣಿಪಾಲದ ಸ್ವರ್ಣ ನದಿಗೆ ಹಾರಿದ ಯುವತಿ: ತೀವ್ರ ಶೋಧ
Friday, August 07, 2026
ಮಣಿಪಾಲದ ಸ್ವರ್ಣ ನದಿಗೆ ಹಾರಿ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಇಂದು ರಾತ್ರಿ ವೇಳೆ ನಡೆದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಮಣಿಪಾಲ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಯುವತಿ ಏಕಾಏಕಿ ಬಂದು ನದಿಗೆ ಹಾರಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದೀಗ ಯುವತಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.