-->
ಮಣಿಪಾಲದಲ್ಲಿ ಸ್ವರ್ಣ ನದಿಗೆ ಹಾರಿದ ಯುವತಿಯ ರಕ್ಷಣೆ

ಮಣಿಪಾಲದಲ್ಲಿ ಸ್ವರ್ಣ ನದಿಗೆ ಹಾರಿದ ಯುವತಿಯ ರಕ್ಷಣೆ


ಮಣಿಪಾಲದ ಸ್ವರ್ಣ ನದಿಗೆ ಹಾರಿದ ಯುವತಿಯೊಬ್ಬಳನ್ನು ಸ್ಥಳೀಯ ಯುವಕರ ಸಹಾಯದಿಂದ ಮಣಿಪಾಲ ಪೊಲೀಸರು ರಕ್ಷಿಸಿದ್ದಾರೆ.

ಗೋವಾ ಮೂಲದ ರೆಹನಾ ರಕ್ಷಿಸಲ್ಪಟ್ಟ ಯುವತಿ. ಈಕೆ ಮಣಿಪಾಲದ ಪಿಜಿಯೊಂದರಲ್ಲಿ ಕೆಲಸಕ್ಕಿದ್ದಳು ಎಂದು ತಿಳಿದು ಬಂದಿದೆ.

ಇಂದು ರಾತ್ರಿ ವೇಳೆ ಶೀಂಭ್ರ ಬ್ರಿಡ್ಜ್ ಬಳಿ ತನ್ನ ದ್ವಿಚಕ್ರ ನಿಲ್ಲಿಸಿ ಹೆಲ್ಮೆಟ್ ಸಹಿತ ನದಿಗೆ ಹಾರಿದ್ದಾಳೆ. ಮಾಹಿತಿ ತಿಳಿದ ಮಣಿಪಾಲ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳೀಯ ಯುವಕರ ಸಹಾಯದಿಂದ ಶೋಧ ಕಾರ್ಯ ನಡೆಸಿದ್ದಾರೆ.  ಈಜಿ ಪೊದೆಯೊಂದರಲ್ಲಿ ಸಿಲುಕಿಕೊಂಡಿದ್ದ ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.


Ads on article

Advertise in articles 1

advertising articles 2

Advertise under the article