ಪಡು ನಿಟ್ಟೂರು ಅಂಗನವಾಡಿ ಕಟ್ಟಡಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಶಿಲಾನ್ಯಾಸ
Saturday, August 29, 2026
ಉಡುಪಿ ನಗರಸಭೆಯ ನಿಟ್ಟೂರು ವಾರ್ಡಿನ ಪಡು ನಿಟ್ಟೂರು ಭಾಗದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಅಂಗನವಾಡಿ ಕಟ್ಟಡದ ಕಾಮಗಾರಿಗೆ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಅವರು, ಪಡು ನಿಟ್ಟೂರು ಭಾಗದ ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆಯಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಸುಮಾರು 20 ಲಕ್ಷ ವೆಚ್ಚದಲ್ಲಿ ನೂತನ ಅಂಗನವಾಡಿ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಶೀಘ್ರದಲ್ಲಿಯೇ ಅಂಗನವಾಡಿ ಲೋಕಾರ್ಪಣೆಗೊಂಡು ಸ್ಥಳೀಯ ಪುಟಾಣಿಗಳಿಗೆ ಶಿಕ್ಷಣದ ಜೊತೆಗೆ ಪೌಷ್ಟಿಕ ಆಹಾರ ಒದಗಿಸಲು ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಸದಸ್ಯರಾದ ಸಂತೋಷ್ ಜತ್ತನ್, ಸ್ಥಳೀಯ ಮುಖಂಡರಾದ ಅಣ್ಣಪ ಸನಿಲ್, ಜಗದೀಶ್ ಶೆಟ್ಟಿ, ರಂಜನ್ ಶೆಟ್ಟಿ, ನವೀನ್ ಸನಿಲ್, ಪ್ರಸಾದ್ ಶೆಟ್ಟಿ, ಪ್ರಜ್ವಲ್, ಅರವಿಂದ, ಅಶ್ವಿನ್ ಕುಂದರ್, ದಿನೇಶ್ ಜತ್ತನ್, ಸುರೇಂದ್ರ, ಅಂಗನವಾಡಿ ಶಿಕ್ಷಕಿ ರೇವತಿ, ಸುರೇಖ, ಜಯಶ್ರೀ ಮೊದಲಾದವರು ಉಪಸ್ಥಿತರಿದ್ದರು.