-->
 ಮನೆ ಮೇಲೆ ಉರುಳಿ ಬಿದ್ದ ಲಾರಿ: ಚಾಲಕ ಸಾವು

ಮನೆ ಮೇಲೆ ಉರುಳಿ ಬಿದ್ದ ಲಾರಿ: ಚಾಲಕ ಸಾವು


ಲಾರಿಯೊಂದು ಮನೆ ಮೇಲೆ ಉರುಳಿ ಚಾಲಕ ಮೃತಪಟ್ಟ ಘಟನೆ ಕಾಸರಗೋಡಿನ ಮಡಿಕೈ ಕಂಞಿರಪೊಯಿಲ್ ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಮೃತರನ್ನು ಚಾಯ್ಯೋಂ ನಿವಾಸಿ ಸಾದಿಕ್ (40) ಎಂದು ಗುರುತಿಸಲಾಗಿದೆ.

ಕೆಂಪುಕಲ್ಲು ಹೇರಿಕೊಂಡು ಬಂದಿದ್ದ ಲಾರಿ ಕಂಞಿರಪೊಯಿಲ್ ಕುಳಂಗಾಟ್‌ನಲ್ಲಿ ಕಲ್ಲು ಅನ್‌ಲೋಡ್ ಮಾಡಿದ ಬಳಿಕ ಮುಂದಕ್ಕೆ ಚಲಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸಮೀಪದ ಪಿ. ಗೋಪಾಲನ್ ಅವರ ಮನೆಯ ಮೇಲೆ ಉರುಳಿಬಿದ್ದಿದೆ.

ಅಪಘಾತದ ತೀವ್ರತೆಗೆ ಮನೆಯ ಅಡುಗೆ ಕೋಣೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸಾದಿಕ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.



 

Ads on article

Advertise in articles 1

advertising articles 2

Advertise under the article