-->
 ಮಣಿಪಾಲದಲ್ಲಿ ಶಾಸಕ ಯಶ್ಪಾಲ್ ನೇತೃತ್ವದಲ್ಲಿ "ತಿರಂಗ ಯಾತ್ರೆ"

ಮಣಿಪಾಲದಲ್ಲಿ ಶಾಸಕ ಯಶ್ಪಾಲ್ ನೇತೃತ್ವದಲ್ಲಿ "ತಿರಂಗ ಯಾತ್ರೆ"


ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ  ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಎ. ಸುವರ್ಣ ಅವರ ನೇತೃತ್ವದಲ್ಲಿ ಇಂದು ಮಣಿಪಾಲದಲ್ಲಿ "ತಿರಂಗಾ ಯಾತ್ರೆ"ಯನ್ನು ಹಮ್ಮಿಕೊಳ್ಳಲಾಯಿತು.


ಮಣಿಪಾಲದ ಗೋಲ್ಡನ್ ಜುಬಿಲೀ ಹಾಲ್ ಬಳಿ ಇರುವ ಕೆನರಾ ಬ್ಯಾಂಕ್ ವೃತ್ತ ಕಛೇರಿಯ ಬಳಿ ತಿರಂಗ ಯಾತ್ರೆಗೆ ಶಾಸಕ ಯಶ್ ಪಾಲ್ ಸುವರ್ಣ ಅವರು ಚಾಲನೆ ನೀಡಿದರು. ಮಣಿಪಾಲ ಕೆ ಎಂಸಿ ಆಸ್ಪತ್ರೆಯ ಮೆಡಿಕಲ್ ಸೂಪರಿಟೆಂಡ್ ಡಾ. ಅವಿನಾಶ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರಸಾದ್ ನೇತ್ರಾಲಯದ  ವೈದ್ಯಕೀಯ ನಿರ್ದೇಶಕರಾದ ಡಾ. ಕೃಷ್ಣ ಪ್ರಸಾದ್ ಕೂಡ್ಲು, ಆದರ್ಶ ಆಸ್ಪತ್ರೆಯ ನಿರ್ದೇಶಕ ಡಾ. ಚಂದ್ರಶೇಖರ್, ಕೆನರಾ ಬ್ಯಾಂಕ್ ಡಿಜಿಎಂ ಅಶೋಕ್, ಅಜಯ್ ಶೆಟ್ಟಿ, ಸಹಕಾರಿ ರತ್ನ ಇಂದ್ರಾಳಿ ಜಯಕರ ಶೆಟ್ಟಿ, ಶ್ರೀನಿವಾಸ್ ಪೂಜಾರಿ,  ವಿಜಯೇಂದ್ರ ಹೆರ್ಗ, ದಿನಕರ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಶ್ರೀಕಾಂತ್ ನಾಯಕ್, ವಸಂತ್ ಕಿಣಿ, ಕುತ್ಯಾರು ನವೀನ್ ಶೆಟ್ಟಿ, ಪ್ರಭಾಕರ್ ಪೂಜಾರಿ, ದಿನೇಶ್ ಅಮೀನ್, ಉಮೇಶ್ ನಾಯ್ಕ್ , ರಾಜು ಕುಲಾಲ್ ಮೊದಲಾದವರು ಭಾಗವಹಿಸಿದ್ದರು. 

ಕೆನರಾ ಬ್ಯಾಂಕ್ ವೃತ್ತ ಕಛೇರಿಯ ಬಳಿಯಿಂದ ಹೊರಟ ತಿರಂಗಾ ಯಾತ್ರೆಯು ಟೈಗರ್ ಸರ್ಕಲ್ - ಸಿಂಡಿಕೇಟ್ ಸರ್ಕಲ್ ಮೂಲಕ ಸಾಗಿ ಮಣಿಪಾಲ ಕಾಯಿನ್ ಸರ್ಕಲ್ ಬಳಿ ಸಮಾಪನಗೊಂಡಿತು.ವಿವಿಧ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. 


 


Ads on article

Advertise in articles 1

advertising articles 2

Advertise under the article