-->
 ಇಂದು  ರಾತ್ರಿ  ಐಫೋನ್ 18 ಪ್ರೊ, ಫೋಲ್ಡೇಬಲ್ ಐಫೋನ್ ಲಾಂಚ್

ಇಂದು ರಾತ್ರಿ ಐಫೋನ್ 18 ಪ್ರೊ, ಫೋಲ್ಡೇಬಲ್ ಐಫೋನ್ ಲಾಂಚ್


ಆಪಲ್ ಕಂಪನಿಯು ಐಫೋನ್‌ನ ಮುಂಬರುವ 18ರ ಸರಣಿಯನ್ನು ಇಂದು ಬಿಡುಗಡೆ ಮಾಡಲಿದೆ.ಇಂದು ರಾತ್ರಿ 9:30ಕ್ಕೆ ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೋದಲ್ಲಿರುವ ಆಪಲ್ ಪಾರ್ಕ್‌ನಲ್ಲಿ ಇಂದು ಆಪಲ್ ಕಂಪನಿಯ ಬಹುನಿರೀಕ್ಷಿತ `Surprise and Shine’ ಲಾಂಚ್ ಈವೆಂಟ್ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಐಫೋನ್ 18 ಪ್ರೊ ಹಾಗೂ ಐಫೋನ್ 18 ಪ್ರೊ ಮ್ಯಾಕ್ಸ್ ಮಾದರಿಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದ್ದು, ಎಲ್ಲರ ಗಮನ ಆಪಲ್‌ನ ಮೊದಲ ಫೋಲ್ಡೇಬಲ್ ಐಫೋನ್ ಮೇಲೆ ನೆಟ್ಟಿದೆ. 

ಪುಸ್ತಕದ ಮಾದರಿಯಲ್ಲಿ ತೆರೆಯಬಹುದಾದ ಈ ಫೋಲ್ಡೇಬಲ್ ಐಫೋನ್‌ಗೆ ಐಫೋನ್ ಡ್ಯುವೋ’ ಅಥವಾ ಐಫೋನ್ ಅಲ್ಟ್ರಾ’ ಎಂಬ ಹೆಸರು ಬರಬಹುದೆಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಅಧಿಕೃತ ಹೆಸರು ಮತ್ತು ವೈಶಿಷ್ಟ್ಯಗಳು ಲಾಂಚ್ ಈವೆಂಟ್‌ನಲ್ಲೇ ಸ್ಪಷ್ಟವಾಗಲಿವೆ.

ಹೊಸ ಫೋಲ್ಡೇಬಲ್ ಐಫೋನ್ ಅತ್ಯಾಧುನಿಕ ತಂತ್ರಜ್ಞಾನ, ದೊಡ್ಡ ಡಿಸ್ಪ್ಲೇ ಹಾಗೂ ಪ್ರೀಮಿಯಂ ಫೀಚರ್‌ಗಳನ್ನು ಒಳಗೊಂಡಿರಲಿದೆ . ಈ ಫೋಲ್ಡೇಬಲ್ ಐಫೋನ್ ಗೆ  'ಐಫೋನ್ ಡ್ಯುವೋ' ಎಂದು ಹೆಸರಿಡಲಾಗಿದೆ. ಈಗಾಗಲೇ ಈ ಫೋನ್‌ಗೆ ಸಂಬಂಧಿಸಿದ ಹಲವು ಚಿತ್ರಗಳು ಹಾಗೂ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದರ ಜೊತೆಗೆ ಹೊಸ ಆಪಲ್ ವಾಚ್ ಮಾದರಿಗಳು, ಏರ್‌ಪಾಡ್ಸ್ ಹಾಗೂ ಇತರ ಆಪಲ್ ಉತ್ಪನ್ನಗಳ ಘೋಷಣೆಯೂ ನಡೆಯುವ ಸಾಧ್ಯತೆಯಿದೆ. ಆಪಲ್ ವಾಚ್ ಸೀರಿಸ್ 12, ಆಪಲ್ ವಾಚ್ ಅಲ್ಟ್ರಾ 4, ಹೊಸ ಏರ್‌ಪಾಡ್ಸ್ ಸೇರಿದಂತೆ ಹಲವು ಉತ್ಪನ್ನಗಳ ಬಗ್ಗೆ ನಿರೀಕ್ಷೆಗಳು ವ್ಯಕ್ತವಾಗಿವೆ. ವಿಶೇಷವೆಂದರೆ, ಇದು ಆಪಲ್‌ನ ನೂತನ ಸಿಇಒ ಜಾನ್ ಟೆರ್ನಸ್ ನೇತೃತ್ವದಲ್ಲಿ ನಡೆಯುತ್ತಿರುವ ಮೊದಲ ಪ್ರಮುಖ ಉತ್ಪನ್ನ ಬಿಡುಗಡೆ ಕಾರ್ಯಕ್ರಮವಾಗಿದೆ. ಜಾನ್ ಟೆರ್ನಸ್ ಸೆಪ್ಟೆಂಬರ್ 1ರಿಂದ ಆಪಲ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಕಂಪನಿ ತಿಳಿಸಿದೆ.

ಕಾರ್ಯಕ್ರಮವನ್ನು Apple ಅಧಿಕೃತ ವೆಬ್‌ಸೈಟ್, ಆಪಲ್ ಟಿವಿ ಆ್ಯಪ್ ಹಾಗೂ ಆಪಲ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ. 



Ads on article

Advertise in articles 1

advertising articles 2

Advertise under the article