-->
 ಸೆ.28ರಿಂದ 30ರವರೆಗೆ ಬ್ಯಾಂಕ್ ಮುಷ್ಕರ: ಸತತ 5 ದಿನ ಸೇವೆಗೆ ಅಡಚಣೆ

ಸೆ.28ರಿಂದ 30ರವರೆಗೆ ಬ್ಯಾಂಕ್ ಮುಷ್ಕರ: ಸತತ 5 ದಿನ ಸೇವೆಗೆ ಅಡಚಣೆ


ಬ್ಯಾಂಕ್‌ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನೇತೃತ್ವದಲ್ಲಿ ಸೆ.28ರಿಂದ 30ರವರೆಗೆ ದೇಶವ್ಯಾಪಿ ಬ್ಯಾಂಕ್‌ ಮುಷ್ಕರ ನಡೆಯಲಿದೆ. ಇದರಿಂದ ಬ್ಯಾಂಕಿಂಗ್‌ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

ಸೆ.26ರಂದು ನಾಲ್ಕನೇ ಶನಿವಾರ ಹಾಗೂ ಸೆ.27ರಂದು ಭಾನುವಾರ ಬ್ಯಾಂಕ್‌ಗಳಿಗೆ ರಜೆ ಇರುವುದರಿಂದ, ಇದರ ಬೆನ್ನಲ್ಲೇ ಮೂರು ದಿನಗಳ ಮುಷ್ಕರ ನಡೆಯಲಿದ್ದು, ಸತತ ಐದು ದಿನ ಬ್ಯಾಂಕಿಂಗ್‌ ಕಾರ್ಯಾಚರಣೆಗೆ ಅಡಚಣೆ ಎದುರಾಗುವ ಸಾಧ್ಯತೆಯಿದೆ.

ಎಲ್ಲ ಶನಿವಾರಗಳನ್ನು ರಜಾದಿನವನ್ನಾಗಿ ಮಾಡಿ ವಾರದಲ್ಲಿ ಐದು ದಿನಗಳ ಕೆಲಸದ ಪದ್ಧತಿ ಜಾರಿಗೆ ತರಬೇಕು, ನಿವೃತ್ತ ನೌಕರರಿಗೆ ಏಕರೂಪದ ತುಟ್ಟಿ ಭತ್ಯೆ ಹಾಗೂ ಪಿಂಚಣಿ ನವೀಕರಣ, ಎನ್‌ಪಿಎಸ್‌ ಅಡಿಯಲ್ಲಿರುವ ಸಿಬ್ಬಂದಿಗೆ ಹಳೆಯ ಪಿಂಚಣಿ ಯೋಜನೆಗೆ ಮರಳಲು ಅವಕಾಶ ನೀಡಬೇಕು ಹಾಗೂ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ ನಿಯಮಗಳಲ್ಲಿನ ತಿದ್ದುಪಡಿಗಳನ್ನು ಸರಿಪಡಿಸಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ.

ಸೆ.11ರಂದು ಮುಷ್ಕರ ನಡೆಸಿದ್ದ ಒಕ್ಕೂಟ, ಬೇಡಿಕೆಗಳು ಈಡೇರದಿದ್ದರೆ ಅ.26ರಿಂದ ನಿರಂತರ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು.  ಗ್ರಾಹಕರಿಗೆ ತೀವ್ರ ಅಡಚಣೆಯಾಗುವ ಉದ್ದೇಶದಿಂದಲೇ ಎರಡು ದಿ್ನದ ಬ್ಯಾಂಕ್ ರಜೆಗೆ ಹೊಂದಿಕೊಂಡೇ ಮುಷ್ಕರ ಹಮ್ಮಿಕೊಂಡಿರುವುದು ಗಮನಾರ್ಹ. 

Ads on article

Advertise in articles 1

advertising articles 2

Advertise under the article