ಕಡಿಯಾಳಿ ಗಣೇಶೋತ್ಸವಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ
Thursday, September 17, 2026
ಉಡುಪಿ ನಗರದ ಕಡಿಯಾಳಿಯ ಕಾತ್ಯಾಯಿನಿ ಮಂಟಪದಲ್ಲಿ ಉಡುಪಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ನಡೆಯುತ್ತಿರುವ 60ನೇ ವರ್ಷದ ಗಣೇಶೋತ್ಸವಕ್ಕೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಅರ್ಚಕ ಚಂದ್ರಶೇಖರ್ ಪ್ರಭು ಅವರು ದೇವರ ಪ್ರಸಾದ ನೀಡಿ ಶಾಸಕ ಯತ್ನಾಳ್ ಅವರನ್ನು ಗೌರವಿಸಿದರು.
ಈ ವೇಳೆ ಡಾ. ರವಿರಾಜ್ ಆಚಾರ್ಯ, ಮಾಜಿ ಶಾಸಕ ರಘುಪತಿ ಭಟ್, ಗಿರೀಶ್ ಅಂಚನ್, ರಾಘವೇಂದ್ರ ಕಿಣಿ, ಜಯಂತ್ ಕುಂದರ್, ಸುವರ್ಧನ್ ನಾಯಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.