-->
ಮಣಿಪಾಲ ಯೂತ್ ಫ್ರೆಂಡ್ಸ್ ವತಿಯಿಂದ  4 ಲಕ್ಷ ರೂ. ವೆಚ್ಚದ ನೆರವು ವಿತರಣೆ

ಮಣಿಪಾಲ ಯೂತ್ ಫ್ರೆಂಡ್ಸ್ ವತಿಯಿಂದ 4 ಲಕ್ಷ ರೂ. ವೆಚ್ಚದ ನೆರವು ವಿತರಣೆ


ಯೂತ್ ಫ್ರೆಂಡ್ಸ್ ಮಣಿಪಾಲ ಸಂಘಟನೆಯು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವದ ಸಂದರ್ಭದಲ್ಲಿ ವಿವಿಧ ವೇಷಗಳನ್ನು ಧರಿಸಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಅಶಕ್ತರಿಗೆ ಮತ್ತು ಅನಾರೋಗ್ಯ ಪೀಡಿತರ ವೈದ್ಯಕೀಯ ಚಿಕಿತ್ಸೆಗೆ ವಿತರಿಸಲಾಯಿತು. 


ಪ್ರಗತಿನಗರದ ಭಾರತ್ ಸ್ಕೌಟ್ ಎಂಡ್ ಗೈಡ್ಸ್ ನಲ್ಲಿ ನಡೆದ ನಡೆದ ಕಾರ್ಯಕ್ರಮದಲ್ಲಿ ಸುಮಾರು 4 ಲಕ್ಷ ಮೌಲ್ಯದ ಪಡಿತರ ಸಾಮಗ್ರಿಗಳು ಹಾಗೂ ಆರ್ಥಿಕ ನೆರವನ್ನು ಬಡ ಹಾಗೂ ಅಗತ್ಯವಿರುವ ವಿದ್ಯಾರ್ಥಿಗಳು ಮತ್ತು ಕುಟುಂಬಗಳಿಗೆ ವಿತರಿಸಲಾಯಿತು. HPR ಸಮೂಹ ಸಂಸ್ಥೆಗಳ ಸಂಸ್ಥಾಪಕ ಹರಿಪ್ರಸಾದ್ ರೈ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಾಂಸ್ಕೃತಿಕ ಆಚರಣೆಯನ್ನು ಸಮಾಜಮುಖಿ ಸೇವೆಯಾಗಿ ಪರಿವರ್ತಿಸಿ, ಅಗತ್ಯವಿರುವ ಕುಟುಂಬಗಳ ನೆರವಿಗೆ ನಿಂತಿರುವ ಮಣಿಪಾಲ ಯೂತ್ ಫ್ರೆಂಡ್ಸ್ ತಂಡದ ಸೇವಾ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು. 



ಈ ಸಂದರ್ಭದಲ್ಲಿ ಕೃಷ್ಣಾಷ್ಟಮಿ ವೇಳೆ ವೇಷ ಧರಿಸಿ ಬಡ ಮಕ್ಕಳ ಚಿಕಿತ್ಸೆಗೆ ಸಹಾಯ ಹಸ್ತ ನೀಡುತ್ತಿರುವ ರವಿ ಕಟಪಾಡಿ, ಯೂತ್ ಫ್ರೆಂಡ್ಸ್ ಮಣಿಪಾಲ್ ಇದರ ಗೌರವ ಅಧ್ಯಕ್ಷ ಗುರುವ ಕಾಂಚನ್ ಹಾಗೂ bharath ಸ್ಕೌಟ್ ಆಂಡ್ ಗೈಡ್ಸ್ ಕರ್ನಾಟಕ ಡಿಸ್ಟ್ರಿಕ್ಟ್ ಅಸೋಸಿಯೇಷನ್ ಉಡುಪಿ ಇದರ ASOC ಸುಮನಾ ಶೇಖರ್, The bharath ಸ್ಕೌಟ್ ಆಂಡ್ ಗೈಡ್ಸ್ ಉಡುಪಿ ಇದರ ಡಿಸ್ಟ್ರಿಕ್ಟ್ ಸೆಕ್ರೆಟರಿ ಬಿ ಆನಂದಾ ಅಡಿಗ, ಪಾರಂಪಳ್ಳಿ ಎಸ್ಕೆ ಸ್ಟುಡಿಯೋ ಮಣಿಪಾಲ ಇದರ ಶ್ರೀಪತಿ ಪೂಜಾರಿ, ಮಣಿಪಾಲ ಸೌಹಾರ್ದ ಕೋ ಆಪರೇಟಿವ್ ಸೊಸೈಟ್ ಉಡುಪಿ ಇದರ ಸಂದೀಪ್ ಕೃಷ್ಣ ಪೂಜಾರಿ, ಕಾರ್ತಿಕ ಇಂಜಿನಿಯರಿಂಗ್ ವರ್ಕ್ಸ್ ಗುಂಡಿಬೈಲು ಇದರ ಸಚಿನ್ ಪೂಜಾರಿ, ರತ್ನ ಎಲ್ ಜತಾನ್, ಜಯಕಾರ ಕುಂದರ್ ಪೇಟೆಬೆಟ್ಟು ಕಟಪಾಡಿ, ಯೂತ್ ಫ್ರೆಂಡ್ಸ್ ಮಣಿಪಾಲ್ ಇದರ ಸ್ಥಾಪಕ ಸುಕುಮಾರ ಮೆಂಡನ್, ಶ್ವೇತು ಕುಮಾರ್, ರವಿ ಸಾಲಿಗ್ರಾಮ, ವಿಘ್ನೇಶ್, ನಾಗರಾಜ್, ಪ್ರವೀಣ್, ಬಸವರಾಜ, ಕನಕ, ಮದನ್, ಮೊಹಮ್ಮದ ಆಸೀಮ,ಚಂದನಾ, ಶಶಿಕಲಾ, ವಿದ್ಯಾಶ್ರೀ, ಯಶಸ್ವಿನಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article