-->
 ಇಂದಿನಿಂದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ

ಇಂದಿನಿಂದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ


ಹೋಟೆಲ್‌, ರೆಸ್ಟೋರೆಂಟ್‌ ಸೇರಿದಂತೆ ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಸೆಪ್ಟೆಂಬರ್‌ 1ರಿಂದ ಹೆಚ್ಚಿಸಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿ 9.50 ರೂ. ನಿಂದ 11.50 ರೂಪಾಯಿವರೆಗೆ ದರ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 10 ರೂ. ಏರಿಕೆಯಾಗಿದ್ದು, ವಾಣಿಜ್ಯ ಸಿಲಿಂಡರ್‌ ಬೆಲೆ ರೂ. 2,831ಕ್ಕೆ ತಲುಪಿದೆ. ತಿರುವನಂತಪುರಂನಲ್ಲಿ 2,784 ರೂ., ಭುವನೇಶ್ವರದಲ್ಲಿ 2,919 ರೂ., ಹೈದರಾಬಾದ್‌ನಲ್ಲಿ 2,996 ರೂ. ಹಾಗೂ ಪಾಟ್ನಾದಲ್ಲಿ 3,029 ರೂಪಾಯಿಗೆ ಪರಿಷ್ಕೃತ ದರ ನಿಗದಿಯಾಗಿದೆ.

ಆದರೆ ಗೃಹಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸತತ ಮೂರನೇ ತಿಂಗಳೂ ಗೃಹಬಳಕೆ ಸಿಲಿಂಡರ್‌ ಬೆಲೆ ಯಥಾಸ್ಥಿತಿಯಲ್ಲಿದೆ. 

Ads on article

Advertise in articles 1

advertising articles 2

Advertise under the article