ಪ್ರಧಾನಿ ಮೋದಿ ಹುಟ್ಟುಹಬ್ಬ: ನಾಗರಿಕರಿಗೆ ಉಚಿತ ಹಾಲು ಪಾಯಸ ವಿತರಣೆ
Thursday, September 17, 2026
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬದ ಅಂಗವಾಗಿ ಉಡುಪಿ ಕಡಿಯಾಳಿಯ ಹೋಟೆಲ್ ಶ್ರೀನಿವಾಸ್ ಮಾಲಕ ನರಸಿಂಹ ಕಿಣಿ ಅವರ ನೇತೃತ್ವದಲ್ಲಿ ನಾಗರಿಕರಿಗೆ ಉಚಿತ ಹಾಲು ಪಾಯಸ ವಿತರಿಸಲಾಯಿತು.
ಕಾರ್ಯಕ್ರಮವನ್ನು ಯುವ ಉದ್ಯಮಿ ಜಯಂತ ಕುಂದರ್ ಉದ್ಘಾಟಿಸಿದರು. ಕಳೆದ ಹಲವು ವರ್ಷಗಳಿಂದ ನರಸಿಂಹ ಕಿಣಿ ಅವರ ನೇತೃತ್ವದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಈ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಕಡಿಯಾಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್ ಕುಲಾಲ್ ಕಡಿಯಾಳಿ, ಯುವ ಉದ್ಯಮಿ ಎಂ. ವಲ್ಲಭ ಭಟ್, ಮಾಜಿ ನಗರಸಭಾ ಸದಸ್ಯ ಗಿರೀಶ್ ಅಂಚನ್, ಸಾಮಾಜಿಕ ಕಾರ್ಯಕರ್ತರಾದ ಸುವರ್ಧನ್ ನಾಯಕ್, ಮಂಜುನಾಥ್ ಹೆಬ್ಬಾರ್, ಸಂತೋಷ್ ಕಿಣಿ, ಸಂಧ್ಯಾ ಪ್ರಭು, ಶೋಭಾ ಕಾಮತ್, ಸಂದೀಪ್ ಸನಿಲ್ ಹಾಗೂ ಸತ್ಯಸಂಗಮದ ಉಮೇಶ್ ಆಚಾರ್ಯ ಉಪಸ್ಥಿತರಿದ್ದರು.
