ಮೈಸೂರು ದಸರಾ: ಕಂಬಳ ಫಲಿತಾಂಶ ಪ್ರಕಟ; 151 ಜೊತೆ ಕೋಣಗಳು ಭಾಗಿ
Tuesday, October 20, 2026
ಈ ಕಂಬಳ ಕೂಟದಲ್ಲಿ ಒಟ್ಟು 151 ಜೊತೆ ಕೋಣಗಳು ಭಾಗವಹಿಸಿ ಗಮನ ಸೆಳೆದವು.
ಕನೆಹಲಗೆ ವಿಭಾಗದಲ್ಲಿ 11 ಜೊತೆ ಕೋಣಗಳು, ಅಡ್ಡಹಲಗೆ ವಿಭಾದಲ್ಲಿ 12 ಜೊತೆ ಕೋಣಗಳು,
ಹಗ್ಗ ಹಿರಿಯ ವಿಭಾಗದಲ್ಲಿ 13 ಜೊತೆ ಕೋಣಗಳು,
ನೇಗಿಲು ಹಿರಿಯ ವಿಭಾಗದಲ್ಲಿ 38 ಜೊತೆ ಕೋಣಗಳು,
ಹಗ್ಗ ಕಿರಿಯ ವಿಭಾಗದಲ್ಲಿ 19 ಜೊತೆ ಕೋಣಗಳು, ನೇಗಿಲು ಕಿರಿಯ ವಿಭಾಗದಲ್ಲಿ 58 ಜೊತೆ ಕೋಣಗಳು ಭಾಗವಹಿಸಿದ್ದು ವಿಶೇಷವಾಗಿತ್ತು.
ಕನೆ ಹಲಗೆ ವಿಭಾಗದಲ್ಲಿ ಬೈಂದೂರು ಸಸಿಹಿತ್ಲು ವೆಂಕಟ ಪೂಜಾರಿ ಅವರ ಕೋಣಗಳು ದಾಖಲೆಯ 6.5 ಮೀಟರ್ ಎತ್ತರದ ಕೋಲು ನಿಶಾನೆಗೆ ನೀರು ಹಾಯಿಸಿ ಪ್ರಥಮ ಬಹುಮಾನ ಪಡೆದವು. ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ.
ವಾಮಂಜೂರು ತಿರುವೈಲುಗುತ್ತು ಅಭಿಷೇಕ್ ನವೀನ್ಚಂದ್ರ ಆಳ್ವ ಅವರ ಕೋಣಗಳು ದ್ವಿತೀಯ ಬಹುಮಾನ ಪಡೆದವು. ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ.
ಅಡ್ಡ ಹಲಗೆ ವಿಭಾಗ: ಇರುವೈಲು ದೊಡ್ಡಗುತ್ತು ಜಗದೀಶ್ ಎಮ್ ಶೆಟ್ಟಿ "ಬಿ" (9.79) ಪ್ರಥಮ. ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ. ವಿಟ್ಲ ಕುಂಡಡ್ಕ ಮರುವಾಳ ಜಯಂತ ದಾಸ (10.06) ದ್ವಿತೀಯ. ಹಲಗೆ ಮುಟ್ಟಿದವರು: ಉಲ್ಲೂರು ಕಂದಾವರ ಗಣೇಶ್.
ಹಗ್ಗ ಹಿರಿಯ ವಿಭಾಗ:ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ (9.27) ಪ್ರಥಮ. ಓಡಿಸಿದವರು: ಕಕ್ಕೆಪದವು ಪೆಂರ್ಗಾಲ್ ಕೃತಿಕ್ ಗೌಡ. ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ (9.86) ದ್ವಿತೀಯ. ಓಡಿಸಿದವರು: ಪಡು ಸಾಂತೂರು ಪೃಥ್ವಿರಾಜ್ ಪೂಜಾರಿ
ಹಗ್ಗ ಕಿರಿಯ ವಿಭಾಗ: ಪದವು ಕಾನಡ್ಕ ಫ್ಲೇವಿ ಡಿಸೋಜ (9.45) ಪ್ರಥಮ. ಓಡಿಸಿದವರು: ಕಾವೂರುದೋಟ ಸುದರ್ಶನ್. ಎರ್ಮಾಳ್ ರೋಹಿತ್ ಹೆಗ್ಡೆ (9.58) ದ್ವಿತೀಯ.
ಓಡಿಸಿದವರು: ಮಿಜಾರು ಅಶ್ವಥಪುರ ಶೀನಿವಾಸ ಗೌಡ
ನೇಗಿಲು ಹಿರಿಯ ವಿಭಾಗ: ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ (9.35) ಪ್ರಥಮ. ಓಡಿಸಿದವರು: ಕುಂದಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್. ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ (9.55) ದ್ವಿತೀಯ. ಓಡಿಸಿದವರು: ಕಕ್ಕೆಪದವು ಪೆಂರ್ಗಾಲ್ ಕೃತಿಕ್ ಗೌಡ.
ನೇಗಿಲು ಕಿರಿಯ ವಿಭಾಗ: ಉಡುಪಿ ಕಕ್ಕುಂಜೆ ರಾಧ ನಿಲಯ ಸಂತೋಷ್ ಶಿವರಾಜ್ ಪೂಜಾರಿ ಪ್ರಥಮ. ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ. ಮುನಿಯಾಲು ಉದಯ ಕುಮಾರ್ ಶೆಟ್ಟಿ ದ್ವಿತೀಯ. ಓಡಿಸಿದವರು: ಕುಂದಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್.


