-->
 ಕುಕ್ಕೆಹಳ್ಳಿ ವ್ಯಾಪ್ತಿಯ ಮೂರು ರಸ್ತೆ ಅಭಿವೃದ್ಧಿಗೆ 60 ಲಕ್ಷ ರೂ. ಅನುದಾನ

ಕುಕ್ಕೆಹಳ್ಳಿ ವ್ಯಾಪ್ತಿಯ ಮೂರು ರಸ್ತೆ ಅಭಿವೃದ್ಧಿಗೆ 60 ಲಕ್ಷ ರೂ. ಅನುದಾನ


ಕಾಪು ವಿಧಾನಸಭಾ ಕ್ಷೇತ್ರದ ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂರು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು 60 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಗುರುವಾರ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.


ಶಾಸಕರ ಶಿಫಾರಸ್ಸಿನ ಮೇರೆಗೆ ಮಂಜೂರಾದ ಅನುದಾನದಲ್ಲಿ ಬೆಳ್ಳಂಪಳ್ಳಿ 5 ಸೆಂಟ್ಸ್ ಕಾಲೋನಿಯಿಂದ ಹೊಸ್ಕುಳಕ್ಕೆ ಹೋಗುವ ರಸ್ತೆ ಅಭಿವೃದ್ಧಿಗೆ 20 ಲಕ್ಷ ರೂ., ಕುಕ್ಕೆಹಳ್ಳಿಯ ಹಿತಾಯು ಆಯುರ್ವೇದ ಆಸ್ಪತ್ರೆಯತ್ತ ಸಾಗುವ ರಸ್ತೆ ಅಭಿವೃದ್ಧಿಗೆ 20 ಲಕ್ಷ ರೂ. ಹಾಗೂ ಕುಕ್ಕೆಹಳ್ಳಿ ಜಡೆಕಲ್ಲು ಪಾದೆಯಿಂದ ಮೇಣ್ ಬೈಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ 20 ಲಕ್ಷ ರೂ. ಮೀಸಲಿಡಲಾಗಿದೆ.

ಈ ಸಂದರ್ಭದಲ್ಲಿ ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುರಂದರ ಕೋಟ್ಯಾನ್, ಮಾಜಿ ಸದಸ್ಯರಾದ ಶಂಕರ್ ಸಾಲ್ಯಾನ್ ಮತ್ತು ಉಷಾ ಪೂಜಾರಿ, ಸ್ಥಳೀಯರಾದ ಹರಿಜೀವನ್ ಹೆಗಡೆ, ಶಿಲ್ಪಾ ಸಾಲ್ಯಾನ್, ಹರೀಶ್ ನಾಯ್ಕ್, ರತ್ನ ಕುಲಾಲ್ತಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article